ಬೆಳಗ್ಗೆ ಬೇಗ
ಏಳುವುದು ಆರೋಗ್ಯಕ್ಕೆ
ಒಳ್ಳೆಯದು ಎಂಬ ಮಾತಿದೆ.
ಹಲವರು ಆರು ಗಂಟೆಗೆ
ಮೊದಲೇ ಹಾಸಿಗೆಯಿಂದೆದ್ದುಬಿಡುತ್ತಾರೆ...
ಕೆಲವರು ತಡರಾತ್ರಿಯಲ್ಲಿ ಮಲಗುವ
ಅಭ್ಯಾಸ ಹೊಂದಿರುತ್ತಾರೆ.
ಇದು ಅವರವರ ರೂಢಿ... ಆದರೆ, ಈ ವಿಷಯದಲ್ಲಿ
ಇಲ್ಲೊಂದು ಭಾರೀ ಕುತೂಹಲಭರಿತ
ಮತ್ತು ವಿಚಿತ್ರ
ಸಂಶೋಧನೆಯೊಂದು ಬಂದಿದೆ. ವಿವಿಧ
ವೇಳೆಯಲ್ಲಿ ಮಲಗುವವರ ವರ್ತನೆಯನ್ನ
ಅರಿಯುವ ಪ್ರಯತ್ನ ನಡೆದಿದೆ.
ಬೇಗ ಏಳುವವರು...
ಬೆಳಗ್ಗೆ ಬೇಗನೇ ಏಳುವವರು ದಿನದಲ್ಲಿ
ತುಂಬಾ ಸಭ್ಯರಾಗಿರುತ್ತಾರೆ. ಆದರೆ,
ಕತ್ತಲು ಆವರಿಸುತ್ತಿದ್ದಂತೆಯೇ ಅವರ
ವರ್ತನೆ ಬದಲಾಗಿಬಿಡುತ್ತದೆ. ತಮ್ಮ
ನಿಷ್ಠೆಯಿಂದ ದೂರ ಹೋಗುವ ಪ್ರವೃತ್ತಿ
ಹೆಚ್ಚಾಗುತ್ತದೆ. ತಮ್ಮ ಸಂಗಾತಿಗೆ
ದ್ರೋಹ ಬಗೆಯುವ
ಪ್ರವೃತ್ತಿಯನ್ನೂ ತೋರುತ್ತಾರಂತೆ.
ರಾತ್ರಿ ತಡವಾಗಿ ಮಲಗುವವರು...
ಮೇಲೆ ಹೇಳಿದ ವರ್ಗದ ಜನರ ವರ್ತನೆಗೆ
ಇವರು ವಿರುದ್ಧ.
ತಡರಾತ್ರಿಯವರೆಗೂ ಎಚ್ಚರವಿದ್ದು ಆನಂತರ
ಮಲಗುವ ಜನರು ಬೆಳಗಿನ
ಹೊತ್ತು ವಿಶ್ವಾಸದ್ರೋಹ ಎಸಗುವ
ಸಾಧ್ಯತೆ ಇರುತ್ತದೆ. ಆದರೆ, ರಾತ್ರಿ
ಹೊತ್ತಿನಲ್ಲಿ
ಇವರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ.
ಯಾರು ಸಂಶೋಧನೆ ಮಾಡಿದ್ದು..?
ಅಮೆರಿಕದ ವಾಷಿಂಗ್ಟನ್'ನಲ್ಲಿರುವ ಜಾನ್ಸ್
ಹಾಪ್ಕಿನ್ಸ್ ಯೂನಿವರ್ಸಿಟಿಯ
ಸಂಶೋಧಕರು ಸುಮಾರು 200ಕ್ಕೂ ಹೆಚ್ಚು ಜನರ
ಮೇಲೆ ಸಮೀಕ್ಷೆ ಮಾಡಿ ಈ ವಿಷಯವನ್ನ ಪತ್ತೆ
ಹಚ್ಚುವ ಪ್ರಯತ್ನ ನಡೆಸಿದೆ.
Wednesday, 23 July 2014
ಮಲಗುವವರ ವರ್ತನೆಯನ್ನ ಅರಿಯುವ ಪ್ರಯತ್ನ ನಡೆದಿದೆ.
Subscribe to:
Post Comments (Atom)
No comments:
Post a Comment