Thursday, 24 April 2014

ಎಲ್ಲಾ ವಸ್ತುಗಳು ಕೊಡುವ ಆನಂದ ಕ್ಷಣಿಕವಾದದ್ದು.

ಶಾಂತಿ ಮತ್ತು ಆನಂದಕ್ಕಾಗಿ
ನಾವೆಲ್ಲರೂ ನಿರಂತರ
ಹುಡುಕಾಟದಲ್ಲಿದ್ದೇವೆ. ಈ ಹುಡುಕಾಟ
ಸಾರ್ವತ್ರಿಕ. ನಿಜ ಹೇಳಿ,
ತಾನು ದುಃಖದಲ್ಲಿರಬೇಕು ಎಂದುಕೊಳ್ಳುವವರು ಯಾರಾದರೂ ಇದ್ದಾರೆಯೇ?
ಜನ ಹಲವು ಬಗೆಯಲ್ಲಿ ಸಂತೋಷದ
ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರಿಗೆ
ಸಂಪತ್ತು ಮತ್ತು ವಸ್ತುಗಳು ಸಂತೋಷ
ಕೊಟ್ಟರೆ ಇನ್ನೂ ಕೆಲವರಿಗೆ ಖ್ಯಾತಿ
ಆನಂದವನ್ನುಂಟುಮಾಡುತ್ತದೆ. ಚಲನಚಿತ್ರ
ನೋಡುವುದರಿಂದ, ಸಂಗೀತ
ಕೇಳುವುದರಿಂದ ಸಾಂಸ್ಕೃತಿಕ
ಕಾರ್ಯಕ್ರಮಗಳ ವೀಕ್ಷಣೆಯಿಂದ, ಟಿವಿ
ನೋಡುವುದರಿಂದ ಐಹಿಕ
ಸುಖಭೋಗಗಳಲ್ಲಿ
ತೊಡಗಿಕೊಳ್ಳುವುದರಲ್ಲಿ ಖುಷಿ
ಕಾಣುತ್ತಾರೆ. ಕೆಲವರಿಗೆ ಆಟೋಟಗಳಲ್ಲಿ
ಭಾಗವಹಿಸುವುದು ಮತ್ತು ಅದನ್ನು ನೋಡುವುದೆಂದರೆ
ಎಲ್ಲಿಲ್ಲದ ಉತ್ಸಾಹ. ಮಾದಕ ವ್ಯಸನ
ಮತ್ತು ಕುಡಿತದಲ್ಲಿ ತಮ್ಮ ಆನಂದ
ಕಂಡುಕೊಳ್ಳುವವರಿದ್ದಾರೆ. ತಮ್ಮ
ಇಷ್ಟಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಅನೇಕರು ಸುಖ
ಕಂಡಿದ್ದಾರೆ. ಒಂದು ಕಾರು, ಮನೆ ಕೊಳ್ಳವ
ಇಚ್ಛೆ ಇರಬಹುದು, ಆಳವಾದ ಅಧ್ಯಯನ
ಮಾಡುವ ತುಡಿತ ಅಥವಾ ಜಗತ್ತಿನ
ಇನ್ಯಾವುದೇ ವಿಷಯ
ಅಥವಾ ವಸ್ತುವನ್ನು ಹೊಂದುವ ಬಯಕೆ
ಇರಬಹುದು.
ಒಂದಲ್ಲ ಒಂದು ಬಯಕೆ
ಈಡೇರಿಸಿಕೊಳ್ಳಲು ಶ್ರಮಿಸುತ್ತಿರುವಾಗಲೇ ಇಡೀ ಬದುಕು ಮುಗಿದು ಹೋಗುತ್ತದೆ.
ಆದರೂ ನಮ್ಮ ಇಚ್ಛೆಗಳಿಗೆ ಕೊನೆಯಿಲ್ಲ.
ಒಂದು ಬಯಕೆ ಮುಗಿದಾಗ
ಮತ್ತೊಂದು ಎದ್ದು ನಿಲ್ಲುತ್ತದೆ.
ಅದನ್ನೂ ಪೂರೈಸಿದಾಗ,
ಇನ್ನೊಂದು ಪುಟಿದೇಳುತ್ತದೆ.
ಪ್ರತಿಬಾರಿಯೂ ಹೊಸ ಕೊಂಡಿ
ಸೇರಿಕೊಳ್ಳುತ್ತಲೇ ಇರುತ್ತದೆ.
ಜಾಹೀರಾತುಗಳ ಪೋಸ್ಟರ್ಗಳು,
ಭಿತ್ತಿಪತ್ರಗಳು ಎಲ್ಲಿ ನೋಡಿದರಲ್ಲಿ
ರಾರಾಜಿಸುತ್ತಿವೆ. ಟಿವಿಗಳಲ್ಲಿ ,
ರೇಡಿಯೋಗಳಲ್ಲಿ
ಅವುಗಳದ್ದೇ ಕಾರುಬಾರು. ನಮಗೆ
ಅಗತ್ಯವಿರುವ ಅಥವಾ ಇಲ್ಲದಿರುವ
ಸಾವಿರಾರು ಉತ್ಪನ್ನಗಳು ಮತ್ತು ಸೇವೆಗಳು ಪೇಟೆಯಲ್ಲಿ
ತುಂಬಿತುಳುಕುತ್ತಿವೆ. ಕೊಳ್ಳುವ ತುಡಿತ
ಹೆಚ್ಚುವಂತೆ ಮಾಡುತ್ತಿವೆ. ಈ
ಎಲ್ಲಾ ವಸ್ತುಗಳು ಕೊಡುವ ಆನಂದ
ಕ್ಷಣಿಕವಾದದ್ದು. ಅವು ಸ್ಪಲ್ಪಕಾಲವಷ್ಟೆ
ತೃಪ್ತಿ ನೀಡಬಹುದು. ಆದರೆ ನಿರಂತರವಾಗಿ
ಅಲ್ಲ. ಇಂತಹ
ವಸ್ತುಗಳು ಅಥವಾ ಸಂಬಂಧಗಳು ಕಳೆದುಹೋದಾಗ
ಅಗಾಧವಾದ
ನೋವನ್ನು ಉಂಟುಮಾಡುತ್ತವೆ.
ಯಾವುದೋ ಒಂದು ಕ್ಷಣದಲ್ಲಿ
ಇಡೀ ಜಗತ್ತೇ ಲೌಕಿಕ
ವಸ್ತುಗಳಿಗೆಲ್ಲಾ ಒಂದಿಲ್ಲೊಂದು ದಿನ
ಅಂತ್ಯವೆಂಬುದಿದೆ. ಕಡೆಗೊಂದು ದಿನ
ನಮಗಿಷ್ಟವಾದದ್ದನ್ನೆಲ್ಲಾ ಬಿಟ್ಟು ನಡೆದು ಬಿಡಬೇಕು ಎಂಬ
ನಗ್ನ ಸತ್ಯ ಮನವರಿಕೆಯಾಗುತ್ತದೆ.
ನಮ್ಮ ವ್ಯವಸ್ಥೆಯಿಡೀ ಬಯಕೆಗಳ
ಸುತ್ತಲೇ ಗಿರಕಿ ಹೊಡೆಯುವುದರಿಂದ,
ಸೂಕ್ತ ಬಯಕೆ
ಯಾವುದೆಂದು ಅರಿತುಕೊಳ್ಳಬೇಕಿದೆ.
ಎಲ್ಲಕ್ಕಿಂತ
ಮೊದಲು ಗುರಿಯನ್ನು ಆಯ್ದುಕೊಳ್ಳಬೇಕು.
ಒಂದಾಗುವ ಗುರಿ
ಹೊಂದುವುದೇ ಜೀವನಕ್ಕೆ ಸರಿಯಾದ
ಗುರಿ. ಆದರೆ ನಾವು ಲೌಕಿಕ
ಆಸೆಗಳನ್ನು ಪೂರೈಸಿಕೊಳ್ಳಲು ಬದುಕಿನ
ಬಹುತೇಕ ಭಾಗವನ್ನು ಸವೆಸುತ್ತೇವೆ.
ಇವೆಲ್ಲಾ ಈಡೇರಿದ
ಬಳಿಕವೂ ಇವ್ಯಾವುವೂ ನಮಗೆ ಸಂತೋಷ
ಕೊಡಲಿಲ್ಲವೆಂಬುದು ಅರಿವಾಗುತ್ತದೆ.
ಸಂತೋಷವನ್ನು ನಮ್ಮೊಳಗೇ ಹುಡುಕಬೇಕೆಂಬ
ತಿಳಿವಳಿಕೆ ಮೂಡುತ್ತದೆ.
ನೆಲ, ಜಲ, ಅನಿಲ ಅನಲಗಳಿಂದ ನಾಶವಾಗದ
ಸಂತೋಷದ ಮೂಲವಿರುವುದು ಒಂದೇ.
ಅದನ್ನು ಯಾವತ್ತೂ ನಮ್ಮಿಂದ
ಕಿತ್ತುಕೊಳ್ಳಲಾಗದು. ನಮ್ಮ ಸಂತೋಷದ
ಮೂಲ..
ನಾವು ಯಾರು ಎಂಬುದಕ್ಕೆ ಉತ್ತರ
ಕಂಡುಕೊಳ್ಳಬೇಕಿದೆ. ಇದು ದೊರೆತರೆ
ಇನ್ಯಾವ ಬಯಕೆ ಈಡೇರಿದಾಗಲೂ ಸಿಕ್ಕದ
ಆನಂದ ನಮ್ಮದಾಗುತ್ತದೆ. ಸರಿಯಾದ
ಸ್ಥಳದಲ್ಲಿ ಹುಡುಕಿದಾಗ ಮಾತ್ರ ಶಾಶ್ವತ
ಆನಂದ ನಮ್ಮದಾಗುತ್ತದೆ.

Wednesday, 23 April 2014

ಧ್ಯಾನಕ್ಕೆ ಕೂತಾಗ ಗಮನಭಂಗವಾಗುತ್ತದೆ.

ಎಷ್ಟು ಪ್ರಯತ್ನಿಸಿದರೂ ಏಕಾಗ್ರತೆಯಿಂದ
ಧ್ಯಾನ
ಮಾಡಲು ಆಗುತ್ತಿಲ್ಲವಾ?
ಹಾಗಾದರೆ ನೀವು ಐ ಕಾಂಟ್
ಮೆಡಿಟೇಟ್
ಸಿಂಡ್ರೋಮ್'ನಿಂದ
ಬಳಲುತ್ತಿದ್ದೀರಾ ಎಂದರ್ಥ.
ಧ್ಯಾನದ ತಂತ್ರ
ಪ್ರಯತ್ನಿಸಿದರೂ ಒಲಿಯುತ್ತಿಲ್ಲ.
ಎಲ್ಲರೂ ಆಳವಾದ ಧ್ಯಾನದಲ್ಲಿ
ಮುಳುಗಿದ್ದರೂ ನನಗೆ ಮಾತ್ರ
ಏಕೆ ಸಾಧ್ಯವಾಗುತ್ತಿಲ್ಲ?''
ಎಂದು ಕೆಲವರು ಕೇಳುತ್ತಾರೆ.
ಪ್ರತಿಯೊಬ್ಬರೂ ಪರಿಪೂರ್ಣವಾಗಿ
ಹೊಂದಬಲ್ಲ
ಯಾವುದೇ ಧ್ಯಾನ
ತಂತ್ರವಿಲ್ಲ. ಆದರೆ ನಿಮಗೆ
ಸೂಕ್ತವಾದ ತಂತ್ರವೊಂದಿದೆ.
ಧ್ಯಾನಸ್ಥ ಸ್ಥಿತಿಗೆ
ಹೋಗಲು ಹಲವಾರು ದಾರಿಗಳಿವೆ.
ಒಂದು ವಿಧಾನ ಕೆಲಸ
ಮಾಡದಿದ್ದರೆ
ಮತ್ತೊಂದನ್ನು ಪ್ರಯತ್ನಿಸಿ.
ನಿಮ್ಮಲ್ಲಿ ಅಶಾಂತವಾಗಿ
ಚಡಪಡಿಸುವ ತೀವ್ರ ಎನರ್ಜಿ
ಇದ್ದಲ್ಲಿ ಚಲನೆಯಿರುವ
ನೃತ್ಯ ಅಥವಾ ಡೈನಮಿಕ್
ಮೆಡಿಟೇಷನ್ ತಂತ್ರ
ಪ್ರಯತ್ನಿಸಬಹುದು.
ಒಂದು ತಂತ್ರದಿಂದ
ಮತ್ತೊಂದು ತಂತ್ರಕ್ಕೆ
ಹೊರಳುವ ಮುನ್ನ ಕನಿಷ್ಠ
ಎರಡು ವಾರಗಳಾದರೂ ಪ್ರಯತ್ನಿಸುವುದು ಒಳ್ಳೆಯದು.
ಒಳ್ಳೆಯ ಪ್ರಯೋಜನೆ ಸಿಗದ
ಹೊರತು, ಪ್ರಯತ್ನವನ್ನು ಏಕೆ
ಮುಂದುವರಿಸಬೇಕು?''
ಎಂದು ನೀವು ಕೇಳಬಹುದು. ಆದರೆ
ಒಂದು ವಿಷಯ ನಿಮ್ಮ
ನೆನಪಲ್ಲಿರಲಿ. ಧ್ಯಾನ
ಎನ್ನುವುದು ಕೂಡಲೇ ಒಲಿಯುವುದಲ್ಲ.
ನಿಯತ ಧ್ಯಾನದ ಅಭ್ಯಾಸ
ರೂಢಿಸಿಕೊಳ್ಳಲು ಕೊಂಚ
ಸಮಯ ಬೇಕಾಗುತ್ತದೆ. ನಿಮಗೆ
ಕೂಡಲೇ ಫಲಿತಾಂಶ
ದೊರೆಯುತ್ತಿಲ್ಲ ಎಂದರೆ
ಅದು ಕೆಲಸ ಮಾಡುತ್ತಿಲ್ಲ
ಎಂದರ್ಥವಲ್ಲ. ನಂಬಿಕೆ ಇರಲಿ.
ಫಲಿತಾಂಶ ಬಂದೇ ಬರುತ್ತದೆ.
ನನ್ನ
ಆಲೋಚನೆಗಳನ್ನು ನಿಲ್ಲಿಸಲಾಗುತ್ತಿಲ್ಲ
ಎನ್ನುವುದು ಕೆಲವರ ಪ್ರಶ್ನೆ.
ಆಲೋಚನೆಗಳನ್ನು ನಿಲ್ಲಿಸುವುದು ಎಂದರೆ
ಗಾಳಿಯನ್ನು ನಿಲ್ಲಿಸಲು ಯತ್ನಿಸಿದಂತೆಯೇ.
ಅದು ಅಸಾಧ್ಯ. ಆದ್ದರಿಂದ
ನಿಯಂತ್ರಿಸುವ
ಬದಲು ಆಲೋಚನೆಗಳನ್ನು ಹೊರಗೆ
ಹೋಗುವಂತೆ ಮಾಡಿ.
ಅವುಗಳನ್ನು ಓಡುವ ಮೋಡದಂತೆ
ನೋಡಿ. ಅವುಗಳ ಹಿಂದೆ
ನಿಮ್ಮಮನಸ್ಸು ಓಡದಂತೆ
ತಡೆಯಿರಿ. ಒಂದು ಕಿವಿಯಿಂದ
ಬಂದು ಇನ್ನೊಂದು ಕಿವಿ
ಮೂಲಕ ಆಲೋಚನೆಗಳು ಹೊರಗೆ
ಹೋಗುತ್ತವೆ ಎಂದು ಭಾವಿಸಿ.
ಇನ್ನು ಸಾಮಾನ್ಯವಾಗಿ
ಎಲ್ಲರೂ ಧ್ಯಾನ ಭಂಗಕ್ಕೆ
ಕಾರಣಗಳನ್ನು ನೀಡುತ್ತಾರೆ.
ಧ್ಯಾನಕ್ಕೆ ಕೂತಾಗ
ಗಮನಭಂಗವಾಗುತ್ತದೆ.
ಶಬ್ದಗಳು ತೊಂದರೆ
ಪಡಿಸುತ್ತವೆ. ಏಕಾಗ್ರತೆ
ಸಾಧಿಸುವುದು ಹೇಗೆ?'' ಎನ್ನುವ
ಪ್ರಶ್ನೆ ಸಾಮಾನ್ಯವಾಗಿ
ಬಹುತೇಕರದು.
ಹೀಗೆಂದು ಸೌಂಡ್ ಪ್ರೂಫ್
ಕೋಣೆಯಲ್ಲಿ ನೀವು ಧ್ಯಾನ
ಮಾಡಬೇಕಿಲ್ಲ. ಶಬ್ದ
ನಿಯಂತ್ರಿತ
ಕೋಣೆಯಿದ್ದರೆ
ಒಳ್ಳೆಯದು. ಆದರೆ ಅಂಥ ಅವಕಾಶ
ಇಲ್ಲದಿರುವಾಗ ಒಳ್ಳೆಯ
ಎರಡು ಇಯರ್
ಫ್ಲಗ್ಗಳನ್ನು ಕಿವಿಗೆ
ಸಿಕ್ಕಿಸಿಕೊಳ್ಳಿ. ಆಗ
ಸುತ್ತಮುತ್ತಲಿನ ಶಬ್ದ
ನಿಧಾನವಾಗಿ
ಕ್ಷೀಣಿಸುತ್ತದೆ.
ಒಂದು ವಿಷಯ ನಿಮ್ಮ
ನೆನಪಲ್ಲಿರಲಿ -
ಧ್ಯಾನವು ನಮ್ಮ
ಮನಸ್ಸನ್ನು ಶಾಂತಗೊಳಿಸುವುದಕ್ಕೆ
ವಿನಾ ಸುತ್ತಮುತ್ತಲಿನ
ವಾತಾವರಣವನ್ನು ಶಾಂತಗೊಳಿಸಲಿಕ್ಕಲ್ಲ.
ಕೆಲವರಿಗೆ ನೆಲದ ಮೇಲೆ ಬಹಳ
ಕಾಲ ಕಾಲು ಮಡಚಿ
ಕೂರಲು ಆಗುವುದಿಲ್ಲ.
ಅಂಥವರು ಬೆನ್ನಿಗೆ
ಆಧಾರವಾಗಿಟ್ಟುಕೊಂಡು,
ಕಾಲು ಚಾಚಿ ಧ್ಯಾನ
ಮಾಡಬಹುದು.
ಅದೂ ಸಾಧ್ಯವಿಲ್ಲದೇ ಹೋದರೆ
ಚಲನೆಯಲ್ಲೇ ಧ್ಯಾನದ
ಅಭ್ಯಾಸ ಮಾಡಬಹುದು.
ಅದೂ ಅಷ್ಟೇ ಲಾಭದಾಯಕ.

Tuesday, 22 April 2014

ಹುಟ್ಟು ಹಬ್ಬದ ಶುಭಾಶಯಗಳು.. ನೆಚ್ಚಿನ ಡಾ|| ರಾಜ್ ಕುಮಾರ್ ರವರಿಗೆ.

ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ
ನಟಿಸುವ ಮುನ್ನ ಡಾ.ರಾಜ್ ಅವರ
ಹೆಸರು ಮುತ್ತುರಾಜ ಎಂದಿತ್ತು.
ಮುತ್ತುರಾಜನ ತಂದೆ
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
ನವರು ಎಂದರೆ ೧೯೩೦-೧೯೫೦ ಕಾಲದಲ್ಲಿ
ಕನ್ನಡ ರಂಗಭೂಮಿಯ ದೊಡ್ಡ ಹೆಸರು.
ರೌದ್ರ ಪಾತ್ರಗಳಿಗೆ ಹೆಸರಾಗಿದ್ದ
ಪುಟ್ಟಸ್ವಾಮಯ್ಯನವರು ಗುಬ್ಬಿ
ಕಂಪನಿ ಯಲ್ಲಿ ಕಲಾವಿದರಾಗಿದ್ದರು.
ಬಡತನದಿಂದಾಗಿ ಮುತ್ತುರಾಜ್
ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ
ನಿಂತಿತು. ಗುಬ್ಬಿ ಕಂಪನಿಯೇ ವಿಶ್ವ
ವಿದ್ಯಾನಿಲಯವಾಯಿತು.
ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ
ಮುತ್ತುರಾಜ್ಗೆ
ಅವರಿಂದಲೇ ತರಬೇತಿಯಾಯಿತು.
ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ
ನಿರ್ವಹಿಸುತ್ತಿದ್ದರು.
ಡಾ.ರಾಜ್ಕುಮಾರ್ ಜೀವನದಲ್ಲಿ ತಂದೆ
ಬೀರಿರುವ ಪ್ರಭಾವ ಅಪಾರ. ಫಾಲ್ಕೆ
ಪ್ರಶಸ್ತಿ ಪ್ರಕಟವಾದಾಗ
ಅವರು ಮೊದಲು ನೆನಪಿಸಿಕೊಂಡದ್ದು ತ
ಂದೆ ಹೇಳಿದ ಮಾತುಗಳನ್ನೇ : "ಇಂತಹ
ಸಾಧನೆ ನಿನ್ನಿಂದ ಸಾಧ್ಯ"
ಎಂದು ಪುಟ್ಟಸ್ವಾಮಯ್ಯನವರು ಮಗನ
ಭವಿಷ್ಯವನ್ನು ಅಂದೇ ನುಡಿದಿದ್ದರು.
ಅದು ನಿಜವಾಯಿತು. "ನನ್ನ ತಂದೆ ರಂಗದ
ಮೇಲೆ ಹುರಿ ಮೀಸೆ ತಿರುಗಿಸುತ್ತಾ,
ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ
ಎಂತಹವರಿಗೂ ಒಂದು ಬಾರಿ ನಡುಕ
ಬರುತ್ತಿತ್ತು" ಎಂದು ತಂದೆಯವರ
ಅಭಿನಯವನ್ನು ಬಣ್ಣಿಸುವ ರಾಜ್ಕುಮಾರ್
ಅವರಿಗೆ ತಂದೆಯ ಅಭಿನಯ ಬಲು ಪ್ರಿಯ.
"ನಾನೂ ಅದೇ ರೀತಿ ಮಾಡಬೇಕೆಂದು
ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ
ಕಶಿಪು ಪಾತ್ರದಲ್ಲಿ ಅವರಂತೆ
ಅಭಿನಯಿಸಲು ಸಾಧ್ಯವೇ ಎಂದು ಪ್ರಯ
ತ್ನಿಸಿದೆ; ಆದರೆ ಬರಲಿಲ್ಲ"
ಎಂದು ಹೇಳಿದ್ದಾರೆ.
ಗುಬ್ಬಿ ಕಂಪನಿಯಲ್ಲಿ
ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿ
ದ್ದಾಗ ಮುತ್ತುರಾಜುವಿಗೆ
"ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ
ಪಾತ್ರ ದೊರಕಿತು. ಕೆಲ ದಿನಗಳ ನಂತರ
ಪುಟ್ಟಸ್ವಾಮಯ್ಯ ನವರು ಗುಬ್ಬಿ
ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ
ನಾಯ್ಡು ಅವರ ಶ್ರೀ ಸಾಹಿತ್ಯ
ಸಾಮ್ರಾಜ್ಯ ನಾಟಕ ಮಂಡಲಿ ಗೆ
ಸೇರಿದಾಗ ಅಕಸ್ಮಾತ್ತಾಗಿ
ಮುತ್ತುರಾಜ್ಗೆ "ಅಂಬರೀಷ" ನಾಟಕದಲ್ಲಿ
ಅಂಬರೀಷನ ತಮ್ಮ ರಮಾಕಾಂತನ ಪಾತ್ರ
ದೊರಕಿತು. ಅನಂತರ "ಕುರುಕ್ಷೇತ್ರ"
ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ
ಮಗ ಅರ್ಜುನನ ಪಾತ್ರ. ರಾಜ್ಕುಮಾರ್ಗೆ
ಇದು ರಂಗತಾಲೀಮು.
೧೯೫೧ರಲ್ಲಿ ತಂದೆ
ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ
ಅಘಾತದಿಂದ ತತ್ತರಿಸಿದ ಮುತ್ತುರಾಜ್,
ಮತ್ತೆ ಗುಬ್ಬಿ ಕಂಪನಿ ಸೇರಿ
"ಭೂ ಕೈಲಾಸ" ನಾಟಕದಲ್ಲಿ
ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ,
ಶ್ರೀ ಸಾಹಿತ್ಯ ಮಂಡಲಿ,
ಶೇಷಾಚಾರ್ಯರ ಶೇಷಕಮಲ ನಾಟಕ
ಮಂಡಳಿಯಲ್ಲಿಯೂ ರಾಜ್ಕುಮಾರ್
ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಚಿತ್ರರಂಗಕ್ಕೆ ನಾಯಕನಾಗಿ
ಪಾದಾರ್ಪಣೆ
೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ
ಚಿತ್ರದಲ್ಲಿ ಬಾಲನಟನಾಗಿಯೂ, ೧೯೫೨ರಲ್ಲಿ
ಬಿಡುಗಡೆಯಾದ ಶಂಕರ್ಸಿಂಗ್ ನಿರ್ದೇಶನದ
ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ
ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ
ಮುತ್ತುರಾಜ್, ರಂಗಭೂಮಿಯಲ್ಲಿ
ಸಕ್ರಿಯರಾಗಿದ್ದರು.
೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ
ಮುತ್ತುರಾಜ್ ದಂಪತಿಗಳು
ನಂಜನಗೂಡಿನಿಂದ ಮೈಸೂರಿಗೆ
ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು.
ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ
ಮೈಸೂರಿಗೆ ಹೋಗಲು ಅಲ್ಲಿಗೆ
ಬಂದಿದ್ದರು.
ಅವರು ಮುತ್ತುರಾಜ್ರವರನ್ನು ಚಿಕ್ಕಂದಿನಿ
ಂದ ನೋಡಿದ್ದರು. ಅಂದು ರೈಲ್ವೆ
ನಿಲ್ದಾಣದಲ್ಲಿ ಆ
ದಂಪತಿಗಳನ್ನು ಕಂಡು ಪ್ರೀತಿಯಿಂದ
ಮಾತನಾಡಿಸಿ, ಯೋಗಕ್ಷೇಮ
ವಿಚಾರಿಸಿದರು. ಸಿಂಹ ಕಣ್ಣಪ್ಪನ ಪಾತ್ರಕ್ಕೆ
ಹೊಸನಟನನ್ನು ಹುಡುಕುತ್ತಿದ್ದ ಸಮಯ.
ಅಂದು ಕಟ್ಟುಮಸ್ತಾದ
ಆಳು ಮುತ್ತರಾಜ್ರವರನ್ನು ಕಂಡ ತಕ್ಷಣ
"ಇವನನ್ನೇ ಕಣ್ಣಪ್ಪನಾಗಿ ಏಕೆ
ಮಾಡಬಾರದು" ಎಂಬ ಭಾವನೆ
ಮೂಡಿತ್ತು. ಮುತ್ತುರಾಜ್ ಬಳಿ
ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ
ಕೋರಿ ಸಿಂಹ ಬೀಳ್ಕೊಟ್ಟಿದ್ದರು.
ಮೇಲಿನ ಘಟನೆ ನಡೆದ ಕೆಲದಿನಗಳಲ್ಲಿ
ಮೈಸೂರಿನ ಟೌನ್ಹಾಲಿನಲ್ಲಿ ಬೇಡರ
ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ
ಮುತ್ತುರಾಜ್ ಕಣ್ಣಪ್ಪನ ಪಾತ್ರ
ವಹಿಸುತ್ತಾರೆ ಎಂದು ಸಿಂಹ ರವರಿಗೆ
ತಿಳಿಯಿತು. ಆ ದಿನ, ಅರ್ಧಗಂಟೆ ನಾಟಕ
ನೋಡಿ, ಮುತ್ತುರಾಜ್ರವರ ತನ್ಮಯತೆಯ
ಅಭಿನಯ ಕಂಡು ಸಿಂಹ
ಸಂತೋಷಪಟ್ಟರು. ಗುಬ್ಬಿ ಕರ್ನಾಟಕ
ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ
ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ
ಈತನೇ ಸರಿಯಾದ ವ್ಯಕ್ತಿ
ಎಂದುಕೊಂಡು ನಿರ್ಮಾಪಕ
ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ,
ಆ ಚಿತ್ರದ ಸಹನಿರ್ಮಾಪಕರಾಗಿದ್ದ ಗುಬ್ಬಿ
ವೀರಣ್ಣ ನವರಿಗೆ ಈ ವಿಷಯ ತಿಳಿಸಿ
ಅವರನ್ನು ಒಪ್ಪಿಸಿದರು. ನಂತರ
ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು
ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್
ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.
ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ
ಮುತ್ತುರಾಜ್ಗೆ ರಾಜಕುಮಾರ್ ಎಂಬ
ಹೊಸ ಹೆಸರಿನ ನಾಮಕರಣವಾಯಿತು.
ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ
ನಾಯಕನಾಗಿ ಅಭಿನಯಿಸಿದರು. ಚಿತ್ರವು
೧೯೫೪ರ ಮೇ ತಿಂಗಳಲ್ಲಿ ಆಗಿನ
ಮೈಸೂರು ರಾಜ್ಯದಲ್ಲಿ ಎಲ್ಲೆಡೆ
ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ
ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ
ಚಿತ್ರವಾಗಿ ಕನ್ನಡ
ಚಿತ್ರರಂಗ ದಲ್ಲಿಯೇ ಒಂದು ಮೈಲಿಗಲ್ಲ
ಾಯಿತು.
ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ
ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ಅವರು
ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ " ಈ
ಉದ್ದ ಮೂಗಿನ
ಮತ್ತು ಹಲ್ಲು ಹುಬ್ಬು ಇರುವವರನ್ನು ಹ
ಾಕಿಕೊಂಡು ಏನು ಚಿತ್ರ
ಮಾಡುತ್ತೀಯ ಎಂದು ಕೇಳಿದ್ದರಂತೆ.
ಆದರೆ ಹೆಚ್.ಎಲ್.ಎನ್.ಸಿಂಹ
ಅವರು ನಿರ್ಮಾಪಕರಿಗೆ
ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ
ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.
ಚಿತ್ರರಂಗದ ಬದುಕು
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ
ನಟನಾಗಿ ಅಭಿನಯಿಸಲು ಪ್ರಾರಂಭಿಸಿದ
ರಾಜಕುಮಾರ್, ಭಕ್ತ ವಿಜಯ , ಹರಿಭಕ್ತ ,
ಓಹಿಲೇಶ್ವರ , ಭೂಕೈಲಾಸ, ಭಕ್ತ
ಕನಕದಾಸ, ನವಕೋಟಿ ನಾರಾಯಣ(ಭಕ್ತ
ಪುರಂದರದಾಸ) ಮುಂತಾದ ಭಕ್ತಿ
ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦
ಚಿತ್ರಗಳಲ್ಲಿ ನಾಯಕ ನಾಗಿ ಅಭಿನಯಿಸಿದ
ಕನ್ನಡದ ಏಕೈಕ ಕಲಾವಿದರು. ೧೯೬೦ರ
ದಶಕದಲ್ಲಿ, ಕಣ್ತೆರೆದು ನೋಡು,
ಗಾಳಿಗೋಪುರ, ನಂದಾದೀಪ,
ಸಾಕು ಮಗಳು, ನಾಂದಿ ಮುಂತಾದ
ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ
ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ
ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ
ಮುಂತಾದ ಐತಿಹಾಸಿಕ ಚಿತ್ರಗಳು ರಾಜ್
ಅಭಿನಯದಲ್ಲಿ ತೆರೆ ಕಂಡವು. ೧೯೬೬ರಲ್ಲಿ
ಬಿಡುಗಡೆಯಾದ ಸಂಗೀತ ಪ್ರಧಾನ
ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ
ಸಂಗೀತ ಗಾರನಾಗಿ ನಟಿಸಿದ ರಾಜ್ ಅವರ
ಅಭಿನಯಕ್ಕೆ ಭಾರತದ ಹೆಸರಾಂತ
ಶಾಸ್ತ್ರೀಯ ಗಾಯಕರಾದ
ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್
ಭೀಮಸೇನ ಜೋಷಿ
ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ
ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ
ರಾಜ್ಕುಮಾರ್ ಶ್ರೀ ರಾಘವೇಂದ್ರ
ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ
ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ
ಬದುಕಿನಲ್ಲಿ ಮಿಕ್ಕೆಲ್ಲ
ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ
ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ
ತಿಳಿಸಿದ್ದಾರೆ. ೧೯೬೮ರಲ್ಲಿ ಬಿಡುಗಡೆಯಾದ
ಜೇಡರ ಬಲೆ ಎಂಬ ಚಿತ್ರದ ಮೂಲಕ
ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ
ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ
ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ
ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯)
ಅಭಿನಯಿಸಿದರು. ಈ ಸರಣಿಯಲ್ಲಿನ ಇತರ
ಚಿತ್ರಗಳು ಆಪರೇಷನ್ ಜಾಕ್ಪಾಟ್ನಲ್ಲಿ
ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯
ಹಾಗು ಆಪರೇಷನ್ ಡೈಮಂಡ್ ರ್ಯಾಕೆಟ್ .
ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ
ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.
ರಾಜ್ಕುಮಾರ್ ಅವರ ನೂರನೇ ಚಿತ್ರವಾದ
ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ
ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ
ನಟಸಾರ್ವಭೌಮ ಎಂಬ ಬಿರುದನ್ನು ನೀಡಿ
ಗೌರವಿಸಲಾಯಿತಲ್ಲದೆ, ಅದೇ ಹೆಸರಿನ
ಚಲನಚಿತ್ರವೂ ( ನಟಸಾರ್ವಭೌಮ ) ಕೂಡ
ತಯಾರಾಯಿತು. ಈ
ಚಿತ್ರವು ರಾಜ್ಕುಮಾರ್ ಅವರ ಹಿಂದಿನ
ನೂರು ಚಿತ್ರಗಳ
ತುಣುಕು ದೃಶ್ಯಗಳನ್ನು ಜೊತೆಗೂಡಿಸಿ
ತಯಾರಿಸು ವ ಯೋಜನೆಯೊಂದಿಗೆ
ಪ್ರಾರಂಭವಾದರೂ, ಸ್ಥಳಾವಕಾಶದ
ಕೊರತೆಯಿಂದ ಕೆಲವು ಚಿತ್ರಗಳ
ತುಣುಕುಗಳನ್ನು ಕೈಬಿಡಲಾಗಿದೆ.
೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ
ನಿವಾಸ ಮತ್ತು ಸಾಕ್ಷಾತ್ಕಾರ
ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಲಲ್ಲಿ
ಮುಖ್ಯವಾದವು. ಈ ಚಿತ್ರಗಳಲ್ಲಿನ
ಆಡಿಸಿನೋಡು ಬೀಳಿಸಿ ನೋಡು ಉರುಳಿ
ಹೋಗದು ಹಾಗು ಒಲವೆ ಜೀವನ
ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ
ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.
ರಾಜ್ಕುಮಾರ್ ಅವರನ್ನು ಖ್ಯಾತಿಯ
ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ
ತೆರೆಕಂಡ ಬಂಗಾರದ ಮನುಷ್ಯ .
ಚಿತ್ರಮಂದಿರದಲ್ಲಿ ಸತತವಾಗಿ
ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ
ಪ್ರದರ್ಶನಗೊಂಡು ಹೊಸ
ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ
ಕನ್ನಡ ಚಿತ್ರರಂಗದಲ್ಲಿ
ಇಂದಿಗೂ ಅಚ್ಚಳಿಯದೇ ನಿಂತಿದೆ. ಈ
ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ
ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ
ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ
ಹೆಸರು ಪಡೆಯಿತು. ರಾಜ್ಕುಮಾರ್ ಅವರ
ನೂರೈವತ್ತನೇ ಚಿತ್ರ, ೧೯೭೩ರಲ್ಲಿ
ತೆರೆಕಂಡ, ಗಂಧದ ಗುಡಿ . ರಾಜ್
ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ
ಚಿತ್ರದಲ್ಲಿ ಕನ್ನಡ ಚಿತ್ರರಂಗ ದ ಮತ್ತೊಬ್ಬ
ಖ್ಯಾತ ನಟರಾದ ವಿಷ್ಣುವರ್ಧನ್
ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ
ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ
ಮನೋಜ್ಞ ಮತ್ತು ಅತ್ಯಂತ
ಭಾವಪೂರ್ಣ ಎಂದು ವಿಮರ್ಶಕರ
ಅಭಿಪ್ರಾಯ. ಇದೇ ವರ್ಷ ಬಿಡುಗಡೆ ಯಾದ
ಸಂಪತ್ತಿಗೆ ಸವಾಲ್ ಚಿತ್ರದ
ಯಾರೇ ಕೂಗಾಡಲಿ,
ಊರೇ ಹೋರಾಡಲಿ ಹಾಡಿನ ಮೂಲಕ
ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ
ಮುಂದಿನ
ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿ
ಸಿದರು. ೧೯೭೫ರಲ್ಲಿ ಬಿಡುಗಡೆಯಾದ
ಮಯೂರ ಚಲನಚಿತ್ರವು ಕನ್ನಡದ ಪ್ರಥಮ
ದೊರೆ ಕದಂಬರ
ಮಯೂರವರ್ಮರನ್ನಾಧರಿಸಿದೆ. ಈ
ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ,
ನಾಡಿರುವುದೆ ನಮಗಾಗಿ ಗೀತೆಯು ರಾಜ್
ಗಾಯನದಲ್ಲಿನ ಅತ್ಯಂತ ಜನಪ್ರಿಯ
ಗೀತೆಗಳಲ್ಲೊಂದು. ೧೯೭೬ರಲ್ಲಿ
ಮೈಸೂರು ವಿಶ್ವವಿದ್ಯಾಲವು ರಾಜ್ಕು
ಮಾರ್ ಅವರಿಗೆ ಗೌರವ ಡಾಕ್ಟರೇಟ್
ಪದವಿಯನ್ನು ನೀಡಿ ಗೌರವಿಸಿತು. ೧೯೭೭ರಲ್ಲಿ
ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ,
ಡಾ.ರಾಜ್ ಶಹನಾಯಿ ವಾದಕರಾಗಿ
ಅಭಿನಯಿಸಿದರು. ಈ ಚಿತ್ರಕ್ಕೆ
ಅವಶ್ಯಕವಾಗಿದ್ದ ಶಹನಾಯಿ
ವಾದನವನ್ನು ನುಡಿಸಿ ದವರು ಭಾರತದ
ಪ್ರಖ್ಯಾತ ಶಹನಾಯಿ ವಾದಕರಾದ
ಉಸ್ತಾದ್ ಬಿಸ್ಮಿಲ್ಲಾ ಖಾನ್.
ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ
ಎಸ್.ಜಾನಕಿ ಯವರು ಹಾಡಿರುವ
ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ
ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ
ಡಾ.ರಾಜ್ ಅಭಿನಯಿಸಿದ್ದಾರೆ. ೧೯೮೦ರ
ದಶಕದಲ್ಲಿ ಸದಭಿರುಚಿಯ ಸಾಮಾಜಿಕ
ಚಿತ್ರಗಳಾದ ಹಾಲುಜೇನು , ಚಲಿಸುವ
ಮೋಡಗಳು, ಹೊಸ ಬೆಳಕು, ಶ್ರಾವಣ
ಬಂತು , ಅನುರಾಗ ಅರಳಿತು , ಶ್ರುತಿ
ಸೇರಿದಾಗ ಮುಂತಾದ ಯಶಸ್ವಿ
ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ
ಡಾ.ರಾಜ್ ಅವರು ಅನಂತ್ ನಾಗ್
ಅವರೊಂದಿಗೆ ಕಾಮನಬಿಲ್ಲು
ಚಿತ್ರದಲ್ಲಿಯೂ, ಶಂಕರ್ ನಾಗ್
ಅವರೊಂದಿಗೆ ಅಪೂರ್ವ ಸಂಗಮ
ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್
ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ
ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ
ಡಾ.ರಾಜ್ ನಟಿಸಿದ್ದಾರೆ. ತಮ್ಮ
ಯೋಗಾಸನಗಳಿಗೆ ಹೆಸರಾಗಿದ್ದ ಡಾ.ರಾಜ್
ಅವರ ವಿವಿಧ ಯೋಗಾಸನಗಳ ಭಂಗಿಗಳು
ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ
ಮೇಲೂ ಮೂಡಿಬಂದಿದೆ. ೧೯೮೩ರಲ್ಲಿ
ಬಂದಂತಹ ಕವಿರತ್ನ ಕಾಳಿದಾಸ, ಡಾ.ರಾಜ್
ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ
ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ
ಕುರುಬನಾಗಿಯೂ, ಮಹಾಕವಿಯಾದ
ಕಾಳಿದಾಸನಾಗಿಯೂ, ದುಷ್ಯಂತ
ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ
ರಾಜ್ ಜೀವ ತುಂಬಿದ್ದಾರೆ. ಈ
ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ
ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ
ಡಾ.ರಾಜ್ ಅಮೋಘ ಅಭಿನಯದ
ಕೊಡುಗೆ
ಮುಖ್ಯವಾದುದೆಂದು ವಿಮರ್ಶಕರ
ಅಭಿಪ್ರಾಯ. ಡಾ.ರಾಜ್ ಅವರ
ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ
ದೇವತಾ ಮನುಷ್ಯ . ಈ ಚಿತ್ರದಲ್ಲಿ ಕನ್ನಡ
ಚಿತ್ರರಂಗದ ಹೆಸರಾಂತ
ನಟಿಯರೊಲ್ಲೊಬ್ಬರಾದ ಸುಧಾರಾಣಿ
ಯವರು ಡಾ.ರಾಜ್ ಅವರ ಪುತ್ರಿಯಾಗಿ
ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ
ಜನಪ್ರಿಯ ನಾಯಕ ನಟರಾದ ಅಂಬರೀಶ್
ಅವರ ಸಹೋದರನಾಗಿ ಒಡಹುಟ್ಟಿದವರು
ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್,
ಸಾಮಾಜಿಕ ಕಳಕಳಿಯ ಚಿತ್ರಗಳತ್ತ
ಒಲವು ತೋರಿದ್ದರು. ಜೀವನ ಚೈತ್ರ
ಚಿತ್ರದ ಮೂಲಕ ಸಾರಾಯಿ ಪಿಡುಗಿನ
ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ
ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ
ಮೂಲಕ ಮಾದಕ ವ್ಯಸನಗಳ ವಿರುದ್ಧ
ಹೋರಾಡುವ ಪಾತ್ರದಲ್ಲಿ ಡಾ.ರಾಜ್
ಅಭಿನಯಿಸಿದರು. ಡಾ.ರಾಜ್ಕುಮಾರ್
ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ
೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ
ಅಂಬರೀಶ ಎಂಬ ಚಿತ್ರದಲ್ಲಿ
ನಟಿಸಬೇಕೆಂಬ ಹಂಬಲವನ್ನು ರಾಜ್
ಹಲವಾರು ಬಾರಿ
ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ
ಕಾರಣ ಅದು ಸಾಧ್ಯವಾಗಲಿಲ್ಲ.
ಬೆಳ್ಳಿತೆರೆಯ ಮೇಲೆ ಡಾ.ರಾಜ್
ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ
ತಮ್ಮ ಪುತ್ರ ಶಿವರಾಜ್ಕುಮಾರ್
ನಾಯಕತ್ವದಲ್ಲಿನ ಜೋಗಿ . ಚಿತ್ರದ ಆರಂಭದ
ದೃಶ್ಯದಲ್ಲಿ ನಾಯಕನ ಜೋಳಿಗೆಗೆ
ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.
ಸುಮಾರು ೨೦೬ ಚಿತ್ರಗಳಲ್ಲಿ
ನಾಯಕನಟರಾಗಿ ನಟಿಸಿರುವ ರಾಜ್
ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ
ನಟಿಸಿದ್ದಾರೆ, ಅವೆಂದರೆ "ಅಣ್ಣ
ತಂಗಿ","ಮುರಿಯದ ಮನೆ" ,"ವಾತ್ಸ ಲ್ಯ",
"ಮನಸಾಕ್ಷಿ", "ಬಾಳ ಬಂದನ" ,"ನನ್ನ
ತಮ್ಮ", "ಭಾಗ್ಯವಂತರು", "ಅಪೂರ್ವ
ಸಂಗಮ" ಮುಂತಾದವುಗಳು.
ಅಲ್ಲಿಯೂ ಅವರು ಮೂಲ
ನಟರನ್ನು ಅನುಕರಿಸದೆ
ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ.
"ಬೇಡರ ಕಣ್ಣಪ್ಪ" ತೆಲುಗಿನಲ್ಲಿ
‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ
ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ
ಡಾ. ರಾಜ್ ಕುಮಾರ್ ಹೀರೊ ಆಗಿ
ನಟಿಸಿದರು. ರಾಜ್ ಕುಮಾರ್ ನಟಿಸಿದ ಏಕೈಕ
ತೆಲುಗು ಚಿತ್ರ  1952ರಲ್ಲಿ ಬಿಡುಗಡೆಯಾದ ಶ್ರೀ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಡಾ. ರಾಜ್ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಸಪ್ತ ಖುಷಿಗಳಲ್ಲಿ ಒಬ್ಬನಾದ ಪಾತ್ರದಲ್ಲಿ ನಟಿಸಿದ್ದ ಆ ಚಿತ್ರದ ಚಿತ್ರೀಕರಣ ಒಂದು ದಿನ ಮಾತ್ರವಿತ್ತು. ಆ ಪಾತ್ರಕ್ಕೆ ರಾಜ್ ಅವರಿಗೆ ಅಂದು ಸಿಕ್ಕಿದ್ದ ಸಂಭಾವನೆ ಐದು ರೂಪಾಯಿ. ಅದರಲ್ಲಿ ಎರಡುವರೆ ರೂಪಾಯಿ ವೆಚ್ಚಮಾಡಿ ತಾಯಿಗೆ ಕಂಬಳಿ ತಂದುಕೊಟ್ಟಿದ್ದರು.

ಯಾವ ಗೋರಿಯ ಮೇಲೆ ಅರಳಿದ ಹೂವಿಗೂ ಹೆಣದ ವಾಸನೆ ಇರುವುದಿಲ್ಲ!

ನಿಮಗೊಂದು ಅಪರೂಪದ ಅವಕಾಶ
ಕೂಡಿಬಂದಿದೆ. ಬೆಂಗಳೂರಿನ
ಚಾಮರಾಜಪೇಟೆಯಲ್ಲಿರುವ ಜಿಂಕೆ
ಪಾರ್ಕ್ ಪಕ್ಕದ ಮಸಣದಲ್ಲಿ,
ಇದೇ ಭಾನುವಾರ
ಏ.27ರಂದು ಸಂಜೆ 4.30 ಗಂಟೆಗೆ
ಪುಸ್ತಕ ಬಿಡುಗಡೆಯ ಭಾಗ್ಯ
ಕಾಣುತ್ತಿದೆ. "ಸ್ಮಶಾನ ಅಂದ್ರೆ
ಅಂತ್ಯವಲ್ಲ, ಆರಂಭ" ಎಂದಿರುವ
ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್
ಅವರು ರಚಿಸಿರುವ 'ಖಾಲಿ ಶಿಲುಬೆ'
ಪಾಪಿಯೊಬ್ಬನ ಪ್ರೇಮ
ಪದ್ಯಗಳು ಬಿಡುಗಡೆಯಾಗುತ್ತಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮುಗಿಸಿಕೊಂಡು ಗಡಿಬಿಡಿಯಿಂದ
ಹೋಗುವ ಹಾಗೂ ಇಲ್ಲ. ಪುಸ್ತಕ
ಬಿಡುಗಡೆಗೆ
ಬಂದವರನ್ನು ಹಿಡಿದಿಟ್ಟುಕೊಳ್ಳಲು ನಾನಾ ಕಾರ್ಯಕ್ರಮಗಳನ್ನು ಕೂಡ
ಆಯೋಜಿಸಲಾಗಿದೆ. ಪಾಕಿಸ್ತಾನ
ಮೂಲದ ಖ್ಯಾತ ಹಿಂದೂಸ್ತಾನಿ
ಗಾಯಕ ಹರಿಕೃಷ್ಣ
ಪಾವಾಜೀ ಅವರಿಂದ ಸಲಾಫಿ,
ಕವ್ವಾಲಿ ಗಾಯನವಿದೆ.
ಅಂತಾರಾಷ್ಟ್ರೀಯ ಹಿಂದೂಸ್ತಾನಿ
ಗಾಯಕ ಸಮೀರ್ ಆತ್ರೇಯ
ಅವರಿಂದಲೂ ಹಾಡುಗಾರಿಕೆಯಿದೆ.
"ಯಾವ ಗೋರಿಯ ಮೇಲೆ ಅರಳಿದ
ಹೂವಿಗೂ ಹೆಣದ ವಾಸನೆ
ಇರುವುದಿಲ್ಲ!" ಎಂಬ ಟಿಪ್ಪಣಿಯಿರುವ
ಕವನ ಸಂಕಲನವನ್ನು ಹಿರಿಯ ಸಾಹಿತಿ
ಬೋಳುವಾರು ಮಹಮ್ಮದ್ ಕುಂಞ
ಅವರು ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಕವಿ, ವಿದ್ಯಾರ್ಥಿ
ಸಮರಜಿತ್ ಲಂಕೇಶ್
ಭಾಗವಹಿಸುತ್ತಿದ್ದಾರೆ. ಟೈಮ್ ಲೈನ್
ಕ್ರಿಯೇಷನ್ಸ್ ಈ ಪುಸ್ತಕ ಬಿಡುಗಡೆ
ಮಾಡುವ
ಜವಾಬ್ದಾರಿಯನ್ನು ಹೊತ್ತಿದೆ.
ಸ್ಮಶಾನದಲ್ಲಿ ಪುಸ್ತಕ ಬಿಡುಗಡೆಯಾ?
ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳದೆ,
ಹೆಚ್ಚು ಚಿಂತೆ ಮಾಡದೆ ಈ ಅಪರೂಪದ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.
ಸುಶ್ರಾವ್ಯವಾದ ಸಂಗೀತ ಆಲಿಸಿರಿ.
ಸ್ನೇಹಿತರನ್ನು ಕರೆದುಕೊಂಡು ಬಂದು ಇತರ
ಸ್ನೇಹಿತರಿಗೂ ಪರಿಚಯಿಸಿ. ಹಳೆ
ಸ್ನೇಹಿತರು,
ಬಂಧುಗಳು ಭೇಟಿಯಾದರೆ
ಆತ್ಮೀಯವಾಗಿ ಮಾತನಾಡಿಸಿ.
ಪ್ರೇತಾತ್ಮಗಳೇನಾದರೂ ಇದ್ದರೆ
ಅವಕ್ಕೂ ನಿಮ್ಮನ್ನು ಭೇಟಿಯಾಗುವ,
ಸಂಗೀತ ಕೇಳುವ ಅವಕಾಶ!

Sunday, 20 April 2014

ವಿಷಕಾರಿ ಅಂಶವನ್ನು ಲಿಂಬೆ ನಿರು ಹೊರಹಾಕುತ್ತದೆ.

ನೈಸರ್ಗಿಕವಾಗಿ ದೊರೆಯುವ ತರಕಾರಿ
ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ
ಅಂಶಗಳಿಂದ ಸಮ್ಮಿಳಿತವಾಗಿದೆ.
ಬರೀ ಸಿಹಿಯಾದ
ಹಣ್ಣು ಮತ್ತು ತರಕಾರಿಯಿಂದ ಮಾತ್ರ
ಆರೋಗ್ಯವಲ್ಲ. ಹುಳಿ, ಒಗರು, ಕಹಿ
ಇರುವ ತರಕಾರಿ ಹಣ್ಣುಗಳೂ ನಮ್ಮ
ಆರೋಗ್ಯವನ್ನು ಕಾಪಾಡುವಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ.
ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ
ಸೇವನೆಯಿಂದ ನಮಗೆ
ಲಾಭವೇ ಹೆಚ್ಚು ಹೊರತು ನಷ್ಟವಲ್ಲ.
ಅಂತಹ ತರಕಾರಿ ಹಣ್ಣು ಲಿಂಬೆ
ಹಣ್ಣಾಗಿದೆ. ಇದು ಸಿಹಿ ಅಂಶದಿಂದ
ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ
ಆರೋಗ್ಯ ಸುಧಾರಕ ಅಂಶಗಳಿಂದ
ಶ್ರೀಮಂತವಾಗಿದೆ.ಲಿಂಬೆಯಿಂದ
ಹಲವಾರು ಆರೋಗ್ಯಕಾರಿ
ಪ್ರಯೋಜನಗಳಿವೆ.
ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್,
ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್
ಸಿ ಮತ್ತು ರೋಗದ ವಿರುದ್ಧ
ಹೋರಾಡುವ
ಸತ್ವಗಳನ್ನು ಒಳಗೊಂಡಿದೆ. ಶುದ್ಧವಾದ
ಲಿಂಬೆನೀರಿನಿಂದ
ಹಲವಾರು ಪ್ರಯೋಜನಗಳಿವೆ
ಅದು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಪ್ರಾತಃ ಕಾಲದಲ್ಲಿ ಲಿಂಬೆ ನೀರಿನ
ಸೇವನ...
ಜೀರ್ಣಕ್ರಿಯೆ:
ದೇಹದಲ್ಲಿರುವ ವಿಷಕಾರಿ
ಅಂಶವನ್ನು ಲಿಂಬೆ
ನಿರು ಹೊರಹಾಕುತ್ತದೆ.
ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ
ಕಂಡುಬರುವ ವಿಷಕಾರಿ
ಅಂಶವನ್ನು ಹೋಗಲಾಡಿಸಲು ಲಿಂಬೆ
ನೀರು ಅಗತ್ಯ. ಕ್ಯಾನ್ಸರ್
ರೋಗಿಗಳಲ್ಲಿ ಕರುಳಿನ
ಚಲನೆಗಳು ಸುಧಾರಣೆಗೊಳ್ಳಲು
ನೀರನ್ನು ಸೂಚಿಸುತ್ತಾರೆ.

Saturday, 19 April 2014

ಬ್ರಾಹ್ಮಣ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಮಹಿಳೆಯನ್ನ ಹೊರಕಳುಹಿಸಿದ್ರು

ಉಡುಪಿ ಕೃಷ್ಣಮಠದಲ್ಲಿನ
ಪಂಕ್ತಿಭೇದ ವಿಚಾರ ಮತ್ತೊಮ್ಮೆ ಜೀವ
ಪಡೆದುಕೊಂಡಿದೆ. ಬಂಟ ಸಮುದಾಯದ
ಮಹಿಳೆಯೊಬ್ಬರನ್ನು ಬ್ರಾಹ್ಮಣ
ಪಂಕ್ತಿಯಿಂದ ಹೊರ ಕಳುಹಿಸಿದ ಪ್ರಕರಣ
ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ
ಪಂಕ್ತಿಭೇದ ಕುರಿತ ಚರ್ಚೆ ಉದ್ಭವಿಸಿದೆ.
ಉಪನ್ಯಾಸಕಿಯಾಗಿರುವ ವನಿತಾ ಶೆಟ್ಟಿ
ಎಂಬವರು ಏಪ್ರಿಲ್ 15ರಂದು ಕೃಷ್ಣಮಠದ
ಬೋಜನ ಶಾಲೆಗೆ ಊಟಕ್ಕೆ ಹೋಗಿದ್ದರು.
ಆದರೆ ಅದು ಬ್ರಾಹ್ಮಣ ಪಂಕ್ತಿಯಾಗಿತ್ತು.
ಈ ಮಹಿಳೆಯ ಕುರಿತು ಸಂಶಯಗೊಂಡ
ಅಲ್ಲಿನ ಸಿಬ್ಬಂದಿ ಈಕೆಯ ಜಾತಿ, ಪಂಗಡ
ಎಲ್ಲವನ್ನೂ ವಿಚಾರಿಸಿದ್ದಾರೆ. ಆಕೆ
ಬ್ರಾಹ್ಮಣಳಲ್ಲ ಎಂದು ತಿಳಿದಾಗ
ಪಂಕ್ತಿಯಿಂದ ಹೊರಹೋಗುವಂತೆ
ಹೇಳಿದ್ದಾರೆ. ಎಲ್ಲರೆದುರೇ ಈ ಘಟನೆ
ನಡೆದಿದ್ದರಿಂದ ಅವಮಾನಗೊಂಡ ಮಹಿಳೆ
ಅಲ್ಲಿಂದ ಹೊರಬಂದಿದ್ದಾರೆ.
ಇನ್ನು, ವಿಷಯ ತಿಳಿದ ಪ್ರಗತಿಪರ
ಸಂಘಟನೆಗಳು ಮತ್ತೊಮ್ಮೆ ಪಂಕ್ತಿಭೇದ
ವಿಚಾರದ ಕುರಿತು ಸರ್ಕಾರದ ಗಮನ
ಸೆಳೆಯಲು ಮುಂದಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಚೇರಿಯ ಮುಂದೆ ಸಾಂಕೇತಿಕ
ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ
ಹೊರಹಾಕಿವೆ. 

ಕೃಷ್ಣ ಮಠ ಸೇರಿದಂತೆ ರಾಜ್ಯ

Discrimination of caste in Udupi temple - ನ್ಯೂಸ್ …: http://youtu.be/oTKBdbsMGT4

ಬಹುತೇಕ ದೇವಾಲಯಗಳಲ್ಲಿ ಜಾತಿ
ಆಧಾರಿತ ಪಂಕ್ತಿಭೇದ ಮಾಡಲಾಗುತ್ತೆ
ಎಂದು ಹಲವಾರು ಬಾರಿ
ಹೋರಾಟಗಳು ನಡೆದಿವೆ. ಹೋರಾಟದ
ನಡುವೆಯೂ ಆಗಾಗ್ಗೆ ಇಂತಹ ಪ್ರಕರಣ
ಮರುಕಳಿಸುತ್ತಲೇ ಇದೆ. 

ಬ್ರಾಹ್ಮಣರು ಮತ್ತು ಇತರರು ಎಂದು ಸಮಾಜದಲ್ಲಿ ಒಡಕು ಮೂಡಿಸುವ ಉಡುಪಿ ಅಷ್ಠಮಠಗಳಿಗೆ ಬ್ರಾಹ್ಮಣರೇತರು ನೀಡುವ ಕಾಣಿಕೆಯ ದುಡ್ಡು ಬೇಡವೇನೋ?

 ಇತರ ಜಾತಿಯವರು ಕೊಡುವ ಕಾಣಿಕೆಯನ್ನು ಪಡೆಯುವ ಅಷ್ಠಮಠಗಳು ಊಟದ ವ್ಯವಸ್ಥೆಯಲ್ಲಿ ಮಾತ್ರ ಯಾಕೆ ತಾರತಮ್ಯ ಮಾಡುತ್ತಿವೆ , ಎಂದು ಡಿಎಸ್ಎಸ್ ಸಂಘಟನೆ ಕಿಡಿಕಾರಿದೆ. 

ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಿ ಭಕ್ತರನ್ನು ಅವಮಾನಿಸುವುದು ಎಷ್ಟು ಸರಿ? 

ಪಂಕ್ತಿಭೇದ ಎನ್ನುವ ಅನಿಷ್ಠ ಪದ್ದತಿಯನ್ನು ಸರಕಾರ ಕೂಡಲೇ ನಿಷೇಧಿಸಬೇಕು ಎಂದು ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಘಟಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಪೇಜಾವರ ಶ್ರೀಗಳ ವಿಷಾದ: ಉಡುಪಿಯಲ್ಲಿ ನಡೆದ ಪಂಕ್ತಿಭೇದದ ಘಟನೆಗೆ ಪೇಜಾವರ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡುತ್ತಿದ್ದ ಶ್ರೀಗಳು, ತಮ್ಮ ಗಮನಕ್ಕೆ ಬಾರದೇ ಈ ಘಟನೆ ನಡೆದಿದೆ. 

ಇದಕ್ಕೆ ನಾವು ವಿಷಾದ ವ್ಯಕ್ತ ಪಡಿಸುತ್ತೇವೆ. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.



ಬೋಳಾದ ತಲೆ ಇದ್ದರೆ ಬುದ್ಧಿಮತ್ತೆ ಹೆಚ್ಚಾಗುತ್ತೆ..!

ತಲೆಗೂದಲು ಬೆಳೆದಿಲ್ಲವೆಂದು ಚಿಂತೆ ಮಾಡಿ
ವ್ಯಾಕುಲದಿಂದಿರುವವರ ಸಂಖ್ಯೆ ಬಹಳ
ಹೆಚ್ಚು. ಆದರೆ, ನ್ಯೂಜಿಲೆಂಡ್'ನ
ಸಂಶೋಧಕರು ಅಚ್ಚರಿಯ ವಿಷಯವನ್ನ
ಹೊರಗೆಡವಿದ್ದಾರೆ. ಬೋಳಾದ ತಲೆಯವರ
ಬುದ್ಧಿಮತ್ತೆ ಗಮನಾರ್ಹ ರೀತಿಯಲ್ಲಿ
ಹೆಚ್ಚಾಗುತ್ತದಂತೆ.
ತಲೆಕೂದಲು ಬೋಳಿಸಿಕೊಂಡಾಗ
ಗಂಡಸರ ಬುದ್ಧಿಮತ್ತೆಯಲ್ಲಿ 10
ಪಾಯಿಂಟುಗಳಷ್ಟು ಏರಿಕೆ ಆಗುತ್ತದೆ
ಎಂದು ಕರಿಲ್ಯಾಡ್ ವಿಶ್ವವಿದ್ಯಾಲಯದ
ಸಂಶೋಧಕರು ಹೇಳಿದ್ದಾರೆ.
ಬಾಲ್ಡಿಯಾಗಿದ್ದವರು ಕೂದಲು ಬೆಳೆಸುವ
ಗೋಜಿಗೆ
ಹೋಗದಿರುವುದೇ ಲೇಸು.
ಅಷ್ಟೇ ಅಲ್ಲ,
ಸಮೃದ್ಧಕೂದಲು ಹೊಂದಿರುವ
ವ್ಯಕ್ತಿಗಳು ತಲೆಬೋಳಿಸಿಕೊಳ್ಳುವ
ಟ್ರೆಂಡ್ ಶುರುವಾಗುವ
ದಿನಗಳು ದೂರವಿಲ್ಲ.
ಸುಮಾರು 400 ಪುರುಷರ ಮೇಲೆ
ಅಧ್ಯಯನ ಮಾಡಿ ಈ ವಿಷಯವನ್ನ
ದೃಢಪಡಿಸಲಾಗಿದೆ. ಅಧ್ಯಯನಕ್ಕೊಳಗಾದ
ವ್ಯಕ್ತಿಗಳು ತಲೆಗೂದಲಿದ್ದವರೇ ಆಗಿದ್ದರು.
ತಲೆಗೂದಲು ಇದ್ದಾಗ ಅವರ ಬುದ್ಧಿಮತ್ತೆ
ಪರೀಕ್ಷೆ (ಐಕ್ಯೂ ಟೆಸ್ಟ್) ಮಾಡಿ
ಅಂಕಿಅಂಶವನ್ನ ದಾಖಲಿಸಲಾಯಿತು. ಬಳಿಕ,
ಅವರ ತಲೆ ಬೋಳಿಸಿದ
ನಂತರವೂ ಮತ್ತೊಮ್ಮೆ ಪರೀಕ್ಷೆ
ಮಾಡಲಾಯಿತು. ಅದಾದ ನಂತರ, ಆ
ವ್ಯಕ್ತಿಗಳು ಮತ್ತೊಮ್ಮೆ
ತಲೆಗೂದಲು ಬೆಳೆಸಿಕೊಳ್ಳುವಂತೆ
ಹೇಳಲಾಯಿತು. ಆಗಲೂ ಐಕ್ಯೂ ಟೆಸ್ಟ್
ಮಾಡಲಾಯಿತು.
ತಲೆಬೋಳಿಸಿಕೊಂಡಾಗ
ಬುದ್ಧಮತ್ತೆಯಲ್ಲಿ 10 ಪಾಯಿಂಟ್ ಹೆಚ್ಚಳ
ಕಂಡುಬಂತು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕೂದಲಿದ್ದರೆ ಏನು ಕಷ್ಟ..?
ತಲೆಯಲ್ಲಿ ಕೂದಲು ಇದ್ದರೆ
ಮಿದುಳಿನಲ್ಲಿರುವ ನರಗಳ ಮೇಲೆ ಅನಗತ್ಯ
ಒತ್ತಡ ಬೀಳುತ್ತದೆ. ಇದರಿಂದ ಮಿದುಳಿನ
ಕಾರ್ಯಚಟುವಟಿಕೆಗೆ ಸ್ವಲ್ಪ
ತೊಡಕು ಉಂಟಾಗುತ್ತದೆ
ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ತಿರುಪತಿ ದೇವಸ್ಥಾನದವರ ಹೇಳಿಕೆ..!
ಬೋಳುತಲೆ ಇದ್ದರೆ ಬುದ್ಧಿಮತ್ತೆ
ಹೆಚ್ಚಾಗುತ್ತೆ ಎಂದು ಹೇಳುತ್ತಿರುವ ಈ
ಸಂಶೋಧನೆಯನ್ನ ಭಾರತದ ಧಾರ್ಮಿಕ
ಸಂಘಟನೆಗಳು ಸ್ವಾಗತಿಸಿವೆ. ನಮ್ಮ
ಧರ್ಮಶಾಸ್ತ್ರಗಳಲ್ಲಿ ಮುಡಿಕೊಡುವ
ಪದ್ಧತಿಯನ್ನ ಸುಮ್ಮನೆ ಮಾಡಿಲ್ಲ.
ಅದಕ್ಕೆಲ್ಲಾ ವೈಜ್ಞಾನಿಕ ಆಧಾರವಿದೆ.
ಇದು ಈ ಸಂಶೋಧನೆಯಿಂದ
ಮತ್ತೊಮ್ಮೆ ಸಾಬೀತಾಗಿದೆ
ಎಂದು ತಿರುಪತಿ ದೇವಸ್ಥಾನದ
ಅಧಿಕಾರಿಗಳು ಪ್ರತಿಕ್ರಿಯಿಸಿರುವುದು ವರದಿಯಾಗಿದೆ.

Friday, 18 April 2014

Selfishness

Walking a mile in another
man's shoes can change your life
for eternity. Of course, you won't
be able to actually do this, but
you can put in the effort into
thinking about the other people
around you and considering how
they might be feeling in any given
situation. Consider how your
mother, your friend, your boss, or
a random person on the street
may be feeling before you take
action, and you may find that the
world isn't as clean cut as you
thought it was. The more you
practice empathy and wondering
what other people are going
through, the sooner you'll be able
to give up your selfishness.

ಮೊಬೈಲ್ ಫೋನುಗಳು ಕೈಯಲ್ಲಿದ್ದರೆ ಅವು ಅತ್ಯಂತ ಅಪಾಯಕಾರಿ; ಬಾಂಬುಗಳಿದ್ದಂತ

 ವಿದ್ಯಾರ್ಥಿಗಳ ಕೈಯಲ್ಲಿದ್ದರೆ ಅವು ಅತ್ಯಂತ ಅಪಾಯಕಾರಿ; ಬಾಂಬುಗಳಿದ್ದಂತೆ
ಮೊಬೈಲುಗಳು ಯುವಜನತೆಗೆ ಅಪಾಯದ ಹೆಬ್ಬಾಗಿಲು ಆಗಿದೆ. ಆದರೂ ಅಸಹಾಯಕ ಪೋಷಕರು ತಮ್ಮ ಮಕ್ಕಳಿಗೆ ಮಹಾಮಾರಿ ಮೊಬೈಲುಗಳನ್ನು ಕೊಡಿಸುತ್ತಿದ್ದಾರೆ'.

ವಿದ್ಯಾರ್ಥಿಗಳು ದಿನದಲ್ಲಿ ಹೆಚ್ಚಿನ ಸಮಯವನ್ನು ಮೊಬೈಲ್ ಜತೆ ಕಳೆಯುತ್ತಿದ್ದಾರೆ. ಇದರಿಂದ ಅವರು ತಮ್ಮ ಅಮೂಲ್ಯ ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಮೊಬೈಲಿಗಾಗಿ ರಂಪಾಟ ಮಾಡುತ್ತಾರೆ ಎಂದು ಪೋಷಕರೂ ಮಕ್ಕಳ ಮನಸ್ಸಿಗೆ ಮಣಿದು, ಕೊಡಿಸಿಬಿಡುತ್ತಾರೆ. ಇದು ಅನಾಹುತಗಳನ್ನು ಸೃಷ್ಟಿಸುತ್ತಿದೆ'.

ವಿದ್ಯಾರ್ಥಿಗಳು ತುಂಬಾ ಸೂಕ್ಷ್ಮಮತಿಗಳಾಗುತ್ತಿದ್ದಾರೆ. ಅವರನ್ನು ಎಚ್ಚರಿಕೆ ಮತ್ತು ಜಾಣ್ಮೆಯಿಂದ ನಿಭಾಯಿಸಬೇಕು.

Wednesday, 16 April 2014

Your one vote can make a majority

Bє яєѕρσηѕιвℓє ¢ιтιzєη. ...
Dσηт мιѕѕ тσ νσтє ƒσя яιgнт ¢αη∂ι∂αтє.
Yσυя  σηє νσтє ¢αη мαкє ∂郃єяєη¢є..
I нανє νσтє∂ ιη єνєяу єℓє¢тιση ѕιη¢є I яєα¢нє∂ тнє αgє σƒ мαנσяιту.  I кησω тнє ρσωєя σƒ тнє νσтє."  Eνєяу νσтє ¢συηтѕ. A ѕιηgℓє νσтє ¢αη ѕωαу
тнє яєѕυℓтѕ ιη α ραятι¢υℓαя ωαу. Mσѕт
¢αη∂ι∂αтєѕ ωιη ву νєяу ѕмαℓℓ мαяgιηѕ. Tнє
α¢тυαℓ ραѕѕ ρєя¢єηтαgє ∂яσρѕ ƒυятнєя ∂σωη.
Bяιηgιηg αвσυт α ρσѕιтινє ¢нαηgє ιη тнє
qυαℓιту σƒ gσνєяηαη¢є ¢αη вє¢σмє α яєαℓιту
σηℓу ωιтн тнє α¢тινє ραятι¢ιραтιση σƒ тнє
νσтєяѕ.

ನಿದ್ದೆ ಬರಲ್ಲವೆಂದುಕೊಳ್ಳಬೇಡ

ನಿದ್ದೆ
ಬರಲ್ಲವೆಂದುಕೊಳ್ಳಬೇಡಿ
ರಾತ್ರಿ ಲೇಟ್ ಆಗಿ
ಮಲಗಿದ್ದೇವೆಂದು ಬೆಳಗ್ಗೆ ಲೇಟ್ ಆಗಿ
ಏಳುವ ಪರಿಪಾಠಕ್ಕೆ ಶರಣಾಗಬೇಡಿ.
ನೀವು ಎಷ್ಟೇ ಹೊತ್ತಿಗೆ
ಮಲಗಿದರೂ ಬೆಳಗ್ಗೆ ನಿಮ್ಮ ಮಾಮೂಲಿಯ
ಸಮಯಕ್ಕೇ ಎಚ್ಚರಗೊಳ್ಳುವುದನ್ನ
ಮರೆಯಬೇಡಿ. ನೀವು ಮಾರನೇ ದಿನ
ರಾತ್ರಿ ಚೆನ್ನಾಗಿ
ನಿದ್ರಾ ಮಂಪರು ಬರುವವರೆಗೂ
ಮಲಗುವ
ಗೋಜಿಗೆ ಹೋಗಬೇಡಿ.
ಟಿವಿ, ಮ್ಯೂಸಿಕ್, ಹೆಂಡ ಬೇಡ...
ಟಿವಿ ಆನ್ ಮಾಡಿ ಸ್ಲೀಪಿಂಗ್ ಟೈಮರ್
ಇಟ್ಟು ಸಂಗೀತ
ಕೇಳಿಕೊಂಡು ಮಲಗುವ ಅಭ್ಯಾಸ
ಹಲವರಿಗೆ ಇರುತ್ತದೆ. ಹಾಗೆಯೇ, "ಎಣ್ಣೆ"
ಹೊಡೆದುಕೊಂಡು ನಿದ್ರೆಗೆ
ಜಾರುವವರ ಸಂಖ್ಯೆಯೂ ಬಹಳವಿದೆ.
ಆದರೆ,
ತಜ್ಞರು ಹೇಳುವ ಪ್ರಕಾರ
ನೀವು ಇಂಥ ಹುಚ್ಚುತನಗಳನ್ನ
ಮಾಡದಿರುವುದೇ ಲೇಸು. ಇಂಥ
ಅಭ್ಯಾಸಗಳಿಂದ ಮುಂದಿನ ದಿನಗಳಲ್ಲಿ
ಹೊಸ ತೊಂದರೆಗಳು ಕಾಡುವ
ಸಾಧ್ಯತೆ ಇರುತ್ತದೆ.
ನಿದ್ದೆ ಬರಲ್ಲವೆಂದುಕೊಳ್ಳಬೇಡಿ
ನಿದ್ರೆ ಬರುತ್ತಿಲ್ಲ
ಎಂದು ನೀವು ತಲೆಕೆಡಿಸಿಕೊಂಡರೆ ನಿದ್ರೆ
ನಿಮ್ಮ ಕೈಗೆಟುವುದೇ ಇಲ್ಲ. ಬೆಡ್'ಗೆ
ಹೋದ ಮೇಲೆ ಸ್ವಲ್ಪ ದೀರ್ಘ
ಉಸಿರಾಟವಾಡಿ ರಿಲ್ಯಾಕ್ಸ್ ಆಗಿ. ನಿಮಗೆ ನಿದ್ದೆ
ಬರುತ್ತಿಲ್ಲ ಎಂಬುದನ್ನ ತಲೆಯಿಂದ
ತೆಗೆದುಹಾಕಿ. ಆಗ ನಿದ್ದೆ ತನ್ನಿಂತಾನೆ ನಿಮ್ಮ
ವಶವಾಗುತ್ತದಂತೆ.
ನಾಳೆಯ ಚಿಂತೆ ಇದ್ದರೆ...
ಈಗಿನ ಕಾಲದಲ್ಲಿ
ಪ್ರತಿಯೊಬ್ಬರು ಸಾಮಾನ್ಯವಾಗಿ
ಬ್ಯುಸಿಯಾಗಿರುತ್ತಾರೆ. ರಾತ್ರಿ
ಲೇಟಾಗಿ ಮಲಗಿ ಬೆಳಗ್ಗೆ
ಬೇಗನೇ ದೌಡಿಯಿಸಬೇಕಾಗುತ್ತದೆ.
ನಾಳೆ ಏನು ಮಾಡಬೇಕೆಂಬ ಚಿಂತೆ
ಹಿಂದಿನ ರಾತ್ರಿಯೇ ಮನಸನ್ನ
ತುಂಬಿಬಿಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ
ನೀವು ಮಾಡಬೇಕಾದ ಸೂಕ್ತ
ಕೆಲಸವೇನೆಂದರೆ, ನಾಳೆಯ ದಿನಕ್ಕಾಗಿ
ರಾತ್ರಿಯೇ ಒಂದಷ್ಟು ಸಿದ್ಧತೆಗಳನ್ನ
ಮಾಡಿಕೊಳ್ಳಿ. ಆಗ, ನಿಮ್ಮ ಮನಸು ಸ್ವಲ್ಪ
ಹಗುರಗೊಂಡು ನಿದ್ರೆ
ಮಾಡಲು ಅವಕಾಶ ಸಿಗುತ್ತದೆ.

Monday, 14 April 2014

ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ ಎಂದು ಎಲ್ಲರೂ ಬಲ್ಲರು.

ಮನುಷ್ಯನ ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ ಎಂದು ಎಲ್ಲರೂ ಬಲ್ಲರು. ನಿದ್ದೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ದಿನದ ಮೂಡ್ ಕೆಟ್ಟು ಗೊಬ್ಬರದಂತಾಗಿಬಿಡುತ್ತದೆ. ಅನೇಕ ಬಾರಿ ಸ್ವಲ್ಪ ನಿದ್ದೆ ಮಾಡಿದರೂ, ಹೆಚ್ಚು ನಿದ್ದೆ ಮಾಡಿದರೂ ಕಷ್ಟ ಎನಿಸುತ್ತದೆ. ಆದರೆ, ನಿದ್ರೆಯ ಒಂದು ಸಿಂಪಲ್ ಟೆಕ್ನಿಕ್ ಅನ್ನ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಸಂಶೋಧಕರ ಈ ಒಂದೂವರೆ ಗಂಟೆ ನಿದ್ದೆಯ ಫಾರ್ಮುಲಾವನ್ನ ನೀವು ಅಳವಡಿಸಿಕೊಂಡರೆ ಸಖತ್ತಾಗಿ ನಿದ್ದೆ ಮಾಡಿ ನೆಮ್ಮದಿಯಿಂದ ಇರಬಹುದು.

ನಮ್ಮ ಮಾಮೂಲಿಯ ನಿದ್ದೆಯನ್ನ ಐದು ಹಂತಗಳನ್ನಾಗಿ ಮಾಡಬಹುದು. ಅಂದರೆ, ಐದು ನಿದ್ರಾವಸ್ಥೆಗಳಿರುತ್ತವೆ. ಒಂದೊಂದು ಹಂತದ ನಿದ್ದೆ 90 ನಿಮಿಷ, ಅಂದರೆ ಒಂದೂವರೆ ಗಂಟೆಯಷ್ಟಿರುತ್ತದೆ. ಈ ಹಂತ ಪೂರ್ಣಗೊಂಡರೆ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಈ ಒಂದೂವರೆ ಗಂಟೆಯ ಹಂತ ಪೂರ್ಣಗೊಳ್ಳದೇ ಮಧ್ಯದಲ್ಲೇ ನಿದ್ರಾಭಂಗವಾದರೆ ಮೂಡ್ ಕೆಟ್ಟುಹೋಗುತ್ತದೆ. ಒಂದೂವರೆ ಗಂಟೆಯ ಇಂಥ ಐದು ಹಂತಗಳನ್ನ ಪೂರ್ಣಗೊಳಿಸಿದರೆ ನಿಮ್ಮ ನಿದ್ದೆ ಸಂಪೂರ್ಣಗೊಳ್ಳುತ್ತದೆ. ಆದರೆ, ಅಷ್ಟು ನಿದ್ದೆ ಮಾಡಲು ಸಮಯ ಇಲ್ಲದವರಿಗೆ ಒಂದೂವರೆ ಗಂಟೆಯ ಫಾರ್ಮುಲಾ ಚೆನ್ನಾಗಿ ವರ್ಕೌಟ್ ಆಗುತ್ತದೆ..

ಏನಿದು ಒಂದೂವರೆ ಗಂಟೆ ಫಾರ್ಮುಲಾ?
ನೀವು ರಾತ್ರಿ 12 ಗಂಟೆಗೆ ಮಲಗುತ್ತೀರಿ ಎಂದಿಟ್ಟುಕೊಳ್ಳಿ. ನೀವು ಅದಕ್ಕೆ ಒಂದೂವರೆ ಗಂಟೆ ಸೇರಿಸುತ್ತಾ ಹೋಗಿ. ಅಂದರೆ, 1:30, 3:00, 4:30, 6:00, 7:30 ಹೀಗೆ ವೇಳಾಪಟ್ಟಿ ಸಿದ್ಧವಾಗುತ್ತದೆ. ಅಂದರೆ, ರಾತ್ರಿ 12 ಗಂಟೆಗೆ ಮಲಗಿದರೆ ನೀವು ಏಳುವ ಸಮಯ ಆ ವೇಳಾಪಟ್ಟಿಯಂತಿರಬೇಕು. ಸರಿಯಾಗಿ ಅದೇ ವೇಳೆಗೆ ನೀವು ಅಲಾರಂ ಇಟ್ಟುಕೊಂಡು ಎದ್ದರೆ ಇಡೀ ದಿನ ನೀವು ಉಲ್ಲಸಿತರಾಗಿರುತ್ತೀರಿ ಎನ್ನುತ್ತಾರೆ ವಿಜ್ಞಾನಿಗಳು

Sunday, 13 April 2014

Dharmasthala and kukke trip

The Sri Manjunatha Swamy Temple has a
history that apparently dates back 800
years, but the main temple building you see
as you enter the temple premises seems to
be new ,and looks like a mansion built in old
South Indian style… similar to the
Mookambika Temple. Of course, the main
temple lies inside the temple
complex and its architecture is quite
exquisite with beautiful carvings on wood
and brass.

Karnataka has many Temples and Kukke
Subramanya is one of them. It is located
in the heart of the Subramanya village,
which is within the Sullia district of
Dakshina Kannada district. This Hindu
Temple is the major pilgrim and tourist
attraction in this area. If you want to visit
the temple, you have to cross the
Kumaradhara River and take a dip in the
river, which is one of the rituals followed
before entering the temple. Crossing the
river along with lots of people can be a
life time experience.
Never ever ever go to Dharmasthala on a long weekend.

Wednesday, 9 April 2014

ಗ್ರೀನ್ ಟೀ ರಾಮಬಾಣವಾಗಿದೆಯಂತೆ

Green tea is now recognized as the healthiest drink on planet earth and all for the right reasons.

It is packed with nutrients and antioxidants that can do wonders to your body with some common benefits including, cancer prevention, increased brain function, lower risk of heart disease, 

prevention of obesity and much more! 

 ಗ್ರೀನ್ ಟೀ ಎಲ್ಲರಿಗೂ ಗೊತ್ತಿರುವ ಹಾಗೆ,ಆರೋಗ್ಯಕರವಾದ ಪಾನಿಯಾ. ಇದೀಗ ಹೊಸ ಅಧ್ಯಯನವೊಂದರ ಪ್ರಕಾರ,ಗ್ರೀನ್ ಟೀ ಮೆದುಳಿನ ಆರೋಗ್ಯಕ್ಕೂ ಅತ್ಯುತ್ತಮವಾದುದಂತೆ.

ಮೆದುಳಿನಲ್ಲಿ ಜ್ಞಾಪಕಶಕ್ತಿಯ ಸಂಬಂಧಿತ
ಅನೇಕ ಪ್ರಕ್ರಿಯೆಗಳನ್ನ ಗ್ರೀನ್
ಟೀ ಉತ್ತಮಪಡಿಸುತ್ತಂತೆ.
ಬುದ್ಧಿಮಾಂದ್ಯತೆ ಸೇರಿದಂತೆ
ಹಲವು ಮಾನಸಿಕ ಅಸ್ವಸ್ಥತೆ ಚಿಕಿತ್ಸೆಗೆ ಗ್ರೀನ್
ಟೀಯನ್ನ
ಬಳಸಬಹುದಂತೆ. ಸ್ವಿಡ್ಜರ್`ಲ್ಯಾಂಡ್`ನ
ಬೇಸೆಲ್(Basel) ವಿಶ್ವವಿದ್ಯಾಲಯದಲ್ಲಿ
ನಡೆಸಿದ ಸಂಶೋಧನೆಯಲ್ಲಿ
ಹಸಿರು ಪಾನಿಯದ ಮಹತ್ವ ಬೆಳಕಿಗೆ ಬಂದಿದೆ.
ಮೆಮೋರ್ ಲಾಸ್`ಗೆ ರಾಮಬಾಣ ಗ್ರೀನ್
ಟೀ: ಮೆಮೋರಿ ಲಾಸ್ ಸಮಸ್ಯೆಗೆ ಚಿಕಿತ್ಸೆ
ನೀಡುವಲ್ಲಿ ಗ್ರೀನ್
ಟೀ ರಾಮಬಾಣವಾಗಿದೆಯಂತೆ. ಮಾನಸಿಕ
ಅವ್ಯವಸ್ಥೆಯನ್ನ ಸರಿಮಾಡಿ ಜ್ಞಾಪಕಶಕ್ತಿ
ವೃದ್ಧಿಸಲು ಗ್ರೀನ್
ಟೀ ಸಹಾಯಕವಾಗುತ್ತೆ ಎನ್ನುತ್ತೆ
ಸಮೀಕ್ಷೆ. ಅಷ್ಟೇ ಅಲ್ಲ, ಟೀ ಕುಡಿದ
ಸ್ವಲ್ಪ ಸ,ಯದಲ್ಲೇ ಇದರ ಎಫೆಕ್ಟ್ ತಿಳಿಯುತ್ತೆ
ಅಂತಾರೆ ಸಂಶೋಧಕರು.
ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವವರಿಗೆ
ಗ್ರೀನ್ ಟೀ ನೀಡಿ ಬಳಿಕ ಎಂಆರ್`ಐ
ಸ್ಕ್ಯಾನ್ ಮಾಡಿರುವ ತಜ್ಞರು ಗ್ರೀನ್
ಟೀ ಕುಡಿದವರ ಮೆದುಳಿನಲ್ಲಿ ಕನೆಕ್ಟಿವಿಟಿ
ಕೆಪಾಸಿಟಿ ಹೆಚ್ಚಾಗಿರುವುದನ್ನ ಪತ್ತೆ
ಹಚ್ಚಿದ್ದಾರೆ.
ನಮ್ಮ ಅಧ್ಯಯನದ ಪ್ರಕಾರ ಗ್ರೀನ್
ಟೀ ಅಲ್ಪ ಸಮಯದಲ್ಲಿ ಮೆದುಳಿನ
ಕಾರ್ಯವೈಖರಿಯನ್ನ
ಉತ್ತೇಜಿಸುತ್ತದೆ.ಇದರಿಂದ ಜ್ಞಾಪಕಶಕ್ತಿ
ವೃದ್ಧಿಯಾಗುವ ಜೊತೆಗೆ ಅಸ್ವಸ್ಥತೆ
ಗುಣವಾಗುತ್ತ




Sunday, 6 April 2014

ನಿದ್ರಾಹೀನತೆ ಹೆಚ್ಚಾದಾಗ ಬೆಳಗ್ಗೆಯೇ ಸುಸ್ತಾಗುವಂತಹ ಲಕ್ಷಣಗಳು ಕಂಡುಬರುತ್ತವೆ.

ಇತ್ತೀಚಿನ ಹೊಸ ಸಂಶೋಧನೆ ಪ್ರಕಾರ,
ಮಲಗುವ ಮುನ್ನ ಎಲೆಕ್ಟ್ರಾನಿಕ್
ಉಪಕರಣಗಳಾದ ಮೊಬೈಲ್, ಟ್ಯಾಬ್ಲೆಟ್,
ಟಿ.ವಿ, ಕಂಪ್ಯೂಟರ್ ಬಳಸುವುದರಿಂದ
ನಿದ್ದೆಗೆ ಭಂಗ ಬರುತ್ತಂತೆ. ಹೀಗಾಗಿ,
ವಿಶ್ವಾದ್ಯಂತ 28 ಮಿಲಿಯನ್ ಮಂದಿ
ನಿದ್ರಾಹೀನತೆ ಸಮಸ್ಯೆಯಿಂದ
ಬಳಲುತ್ತಿದ್ದಾರೆ ಅಂತಾರೆ
ಸಂಶೋಧಕರು. ಕನಿಷ್ಠ ಪಕ್ಷ 7
ಗಂಟೆಯೂ ನಿದ್ದೆ
ಮಾಡಲಾಗದೇ ನಾನಾ ಸಮಸ್ಯೆಗಳಿಗೆ
ತುತ್ತಾಗುತ್ತಿದ್ದಾರಂತೆ.
ಎಲೆಕ್ಟ್ರಾನಿಕ್ ಉಪಕರಣಗಳಿಂದ ನಿದ್ದೆಗೆ
ಭಂಗಬರುವುದು ಹೇಗೆ..?: ಎಲೆಕ್ಟ್ರಾನಿಕ್
ಉಪಕರಣಗಳಿಂದ ಹೊರಬರುವ ನೀಲಿ
ಬಣ್ಣದ ಲೈಟ್ ಆರೋಗ್ಯದ ಮೇಲೆ
ಪ್ರಮುಖ ಪರಿಣಾಮ ಬೀರುತ್ತಂತೆ. ಈ
ಲೈಟ್ ಮೆದುಳಿನಲ್ಲಿ ನಿದ್ರೆಗೆ
ಪ್ರೇರೇಪಿಸುವ ಮೆಲಟೋನಿನ್
(melatonin) ಹಾರ್ಮೋನ್ ಉತ್ಪಾದನೆಗೆ
ತೊಡಕುಂಟು ಮಾಡುತ್ತದೆಯಂತೆ.
ಇದರಿಂದಾಗಿ ಸರಿಯಾಗಿ ನಿದ್ದೆ
ಬಾರದೇ ಒದ್ದಾಡಬೇಕಾದ ಪರಿಸ್ಥಿತಿ
ಬರುತ್ತದೆ. ಇದರಿಂದಾಗಿ ಬೆಳಗ್ಗೆ ಏಳುವಾಗ
ಕಣ್ಣು ಮಂಜಾಗುವಿಕೆ ಕಂಡುಬರುತ್ತದೆ.
ನಿದ್ರಾಹೀನತೆ ಹೆಚ್ಚಾದಾಗ
ಬೆಳಗ್ಗೆಯೇ ಸುಸ್ತಾಗುವಂತಹ
ಲಕ್ಷಣಗಳು ಕಂಡುಬರುತ್ತವೆ.
ಕನಿಷ್ಠ ಪಕ್ಷ ಆರೋಗ್ಯಕ್ಕೆ ಅವಶ್ಯವಾದ 7
ಗಂಟೆಯಾದರೂ ನಿದ್ದೆ
ಮಾಡಲು ಸಾಧ್ಯವಾಗದಿದ್ದರೆ ತೂಕ
ಹೆಚ್ಚಾಗುವಿಕೆ, ಡಯಾಬಿಟಿಸ್,
ಹೃದಯಾಘಾತದಂತಹ
ಸಮಸ್ಯೆಗಳು ಎದುರಾಗುತ್ತವೆ
ಎನ್ನುತ್ತಾರೆ ಬ್ರಿಟನ್ನಿನ
ಹರ್ಟ್`ಫೋರ್ಡ್`ಶೇರ್ ವಿಶ್ವವಿದ್ಯಾಲಯದ
ತಜ್ಞರು.
ಇದುವರೆಗೆ ನಿದ್ರಾಹೀನತೆಯಿಂದ
ಬಳಲುತ್ತಿರುವ ಪ್ರತಿ 10 ಮಂದಿಯಲ್ಲಿ 8 ಜನ
ಎಲೆಕ್ಟ್ರಾನಿಕ್ ಉಪಕರಣಗಳನ್ನ
ಬಳಸಿಯೇ ಸಮಸ್ಯೆ
ಎದುರಿಸುತ್ತಿರುವುದು ಅಧ್ಯಯನದಿಂದ
ತಿಳಿದುಬಂದಿದೆ ಅಂತಾರೆ ತಜ್ಞರು.