Saturday, 19 April 2014

ಬ್ರಾಹ್ಮಣ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಮಹಿಳೆಯನ್ನ ಹೊರಕಳುಹಿಸಿದ್ರು

ಉಡುಪಿ ಕೃಷ್ಣಮಠದಲ್ಲಿನ
ಪಂಕ್ತಿಭೇದ ವಿಚಾರ ಮತ್ತೊಮ್ಮೆ ಜೀವ
ಪಡೆದುಕೊಂಡಿದೆ. ಬಂಟ ಸಮುದಾಯದ
ಮಹಿಳೆಯೊಬ್ಬರನ್ನು ಬ್ರಾಹ್ಮಣ
ಪಂಕ್ತಿಯಿಂದ ಹೊರ ಕಳುಹಿಸಿದ ಪ್ರಕರಣ
ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ
ಪಂಕ್ತಿಭೇದ ಕುರಿತ ಚರ್ಚೆ ಉದ್ಭವಿಸಿದೆ.
ಉಪನ್ಯಾಸಕಿಯಾಗಿರುವ ವನಿತಾ ಶೆಟ್ಟಿ
ಎಂಬವರು ಏಪ್ರಿಲ್ 15ರಂದು ಕೃಷ್ಣಮಠದ
ಬೋಜನ ಶಾಲೆಗೆ ಊಟಕ್ಕೆ ಹೋಗಿದ್ದರು.
ಆದರೆ ಅದು ಬ್ರಾಹ್ಮಣ ಪಂಕ್ತಿಯಾಗಿತ್ತು.
ಈ ಮಹಿಳೆಯ ಕುರಿತು ಸಂಶಯಗೊಂಡ
ಅಲ್ಲಿನ ಸಿಬ್ಬಂದಿ ಈಕೆಯ ಜಾತಿ, ಪಂಗಡ
ಎಲ್ಲವನ್ನೂ ವಿಚಾರಿಸಿದ್ದಾರೆ. ಆಕೆ
ಬ್ರಾಹ್ಮಣಳಲ್ಲ ಎಂದು ತಿಳಿದಾಗ
ಪಂಕ್ತಿಯಿಂದ ಹೊರಹೋಗುವಂತೆ
ಹೇಳಿದ್ದಾರೆ. ಎಲ್ಲರೆದುರೇ ಈ ಘಟನೆ
ನಡೆದಿದ್ದರಿಂದ ಅವಮಾನಗೊಂಡ ಮಹಿಳೆ
ಅಲ್ಲಿಂದ ಹೊರಬಂದಿದ್ದಾರೆ.
ಇನ್ನು, ವಿಷಯ ತಿಳಿದ ಪ್ರಗತಿಪರ
ಸಂಘಟನೆಗಳು ಮತ್ತೊಮ್ಮೆ ಪಂಕ್ತಿಭೇದ
ವಿಚಾರದ ಕುರಿತು ಸರ್ಕಾರದ ಗಮನ
ಸೆಳೆಯಲು ಮುಂದಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಚೇರಿಯ ಮುಂದೆ ಸಾಂಕೇತಿಕ
ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ
ಹೊರಹಾಕಿವೆ. 

ಕೃಷ್ಣ ಮಠ ಸೇರಿದಂತೆ ರಾಜ್ಯ

Discrimination of caste in Udupi temple - ನ್ಯೂಸ್ …: http://youtu.be/oTKBdbsMGT4

ಬಹುತೇಕ ದೇವಾಲಯಗಳಲ್ಲಿ ಜಾತಿ
ಆಧಾರಿತ ಪಂಕ್ತಿಭೇದ ಮಾಡಲಾಗುತ್ತೆ
ಎಂದು ಹಲವಾರು ಬಾರಿ
ಹೋರಾಟಗಳು ನಡೆದಿವೆ. ಹೋರಾಟದ
ನಡುವೆಯೂ ಆಗಾಗ್ಗೆ ಇಂತಹ ಪ್ರಕರಣ
ಮರುಕಳಿಸುತ್ತಲೇ ಇದೆ. 

ಬ್ರಾಹ್ಮಣರು ಮತ್ತು ಇತರರು ಎಂದು ಸಮಾಜದಲ್ಲಿ ಒಡಕು ಮೂಡಿಸುವ ಉಡುಪಿ ಅಷ್ಠಮಠಗಳಿಗೆ ಬ್ರಾಹ್ಮಣರೇತರು ನೀಡುವ ಕಾಣಿಕೆಯ ದುಡ್ಡು ಬೇಡವೇನೋ?

 ಇತರ ಜಾತಿಯವರು ಕೊಡುವ ಕಾಣಿಕೆಯನ್ನು ಪಡೆಯುವ ಅಷ್ಠಮಠಗಳು ಊಟದ ವ್ಯವಸ್ಥೆಯಲ್ಲಿ ಮಾತ್ರ ಯಾಕೆ ತಾರತಮ್ಯ ಮಾಡುತ್ತಿವೆ , ಎಂದು ಡಿಎಸ್ಎಸ್ ಸಂಘಟನೆ ಕಿಡಿಕಾರಿದೆ. 

ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಿ ಭಕ್ತರನ್ನು ಅವಮಾನಿಸುವುದು ಎಷ್ಟು ಸರಿ? 

ಪಂಕ್ತಿಭೇದ ಎನ್ನುವ ಅನಿಷ್ಠ ಪದ್ದತಿಯನ್ನು ಸರಕಾರ ಕೂಡಲೇ ನಿಷೇಧಿಸಬೇಕು ಎಂದು ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಘಟಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಪೇಜಾವರ ಶ್ರೀಗಳ ವಿಷಾದ: ಉಡುಪಿಯಲ್ಲಿ ನಡೆದ ಪಂಕ್ತಿಭೇದದ ಘಟನೆಗೆ ಪೇಜಾವರ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡುತ್ತಿದ್ದ ಶ್ರೀಗಳು, ತಮ್ಮ ಗಮನಕ್ಕೆ ಬಾರದೇ ಈ ಘಟನೆ ನಡೆದಿದೆ. 

ಇದಕ್ಕೆ ನಾವು ವಿಷಾದ ವ್ಯಕ್ತ ಪಡಿಸುತ್ತೇವೆ. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.



No comments:

Post a Comment