Monday, 14 April 2014

ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ ಎಂದು ಎಲ್ಲರೂ ಬಲ್ಲರು.

ಮನುಷ್ಯನ ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ ಎಂದು ಎಲ್ಲರೂ ಬಲ್ಲರು. ನಿದ್ದೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ದಿನದ ಮೂಡ್ ಕೆಟ್ಟು ಗೊಬ್ಬರದಂತಾಗಿಬಿಡುತ್ತದೆ. ಅನೇಕ ಬಾರಿ ಸ್ವಲ್ಪ ನಿದ್ದೆ ಮಾಡಿದರೂ, ಹೆಚ್ಚು ನಿದ್ದೆ ಮಾಡಿದರೂ ಕಷ್ಟ ಎನಿಸುತ್ತದೆ. ಆದರೆ, ನಿದ್ರೆಯ ಒಂದು ಸಿಂಪಲ್ ಟೆಕ್ನಿಕ್ ಅನ್ನ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಸಂಶೋಧಕರ ಈ ಒಂದೂವರೆ ಗಂಟೆ ನಿದ್ದೆಯ ಫಾರ್ಮುಲಾವನ್ನ ನೀವು ಅಳವಡಿಸಿಕೊಂಡರೆ ಸಖತ್ತಾಗಿ ನಿದ್ದೆ ಮಾಡಿ ನೆಮ್ಮದಿಯಿಂದ ಇರಬಹುದು.

ನಮ್ಮ ಮಾಮೂಲಿಯ ನಿದ್ದೆಯನ್ನ ಐದು ಹಂತಗಳನ್ನಾಗಿ ಮಾಡಬಹುದು. ಅಂದರೆ, ಐದು ನಿದ್ರಾವಸ್ಥೆಗಳಿರುತ್ತವೆ. ಒಂದೊಂದು ಹಂತದ ನಿದ್ದೆ 90 ನಿಮಿಷ, ಅಂದರೆ ಒಂದೂವರೆ ಗಂಟೆಯಷ್ಟಿರುತ್ತದೆ. ಈ ಹಂತ ಪೂರ್ಣಗೊಂಡರೆ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಈ ಒಂದೂವರೆ ಗಂಟೆಯ ಹಂತ ಪೂರ್ಣಗೊಳ್ಳದೇ ಮಧ್ಯದಲ್ಲೇ ನಿದ್ರಾಭಂಗವಾದರೆ ಮೂಡ್ ಕೆಟ್ಟುಹೋಗುತ್ತದೆ. ಒಂದೂವರೆ ಗಂಟೆಯ ಇಂಥ ಐದು ಹಂತಗಳನ್ನ ಪೂರ್ಣಗೊಳಿಸಿದರೆ ನಿಮ್ಮ ನಿದ್ದೆ ಸಂಪೂರ್ಣಗೊಳ್ಳುತ್ತದೆ. ಆದರೆ, ಅಷ್ಟು ನಿದ್ದೆ ಮಾಡಲು ಸಮಯ ಇಲ್ಲದವರಿಗೆ ಒಂದೂವರೆ ಗಂಟೆಯ ಫಾರ್ಮುಲಾ ಚೆನ್ನಾಗಿ ವರ್ಕೌಟ್ ಆಗುತ್ತದೆ..

ಏನಿದು ಒಂದೂವರೆ ಗಂಟೆ ಫಾರ್ಮುಲಾ?
ನೀವು ರಾತ್ರಿ 12 ಗಂಟೆಗೆ ಮಲಗುತ್ತೀರಿ ಎಂದಿಟ್ಟುಕೊಳ್ಳಿ. ನೀವು ಅದಕ್ಕೆ ಒಂದೂವರೆ ಗಂಟೆ ಸೇರಿಸುತ್ತಾ ಹೋಗಿ. ಅಂದರೆ, 1:30, 3:00, 4:30, 6:00, 7:30 ಹೀಗೆ ವೇಳಾಪಟ್ಟಿ ಸಿದ್ಧವಾಗುತ್ತದೆ. ಅಂದರೆ, ರಾತ್ರಿ 12 ಗಂಟೆಗೆ ಮಲಗಿದರೆ ನೀವು ಏಳುವ ಸಮಯ ಆ ವೇಳಾಪಟ್ಟಿಯಂತಿರಬೇಕು. ಸರಿಯಾಗಿ ಅದೇ ವೇಳೆಗೆ ನೀವು ಅಲಾರಂ ಇಟ್ಟುಕೊಂಡು ಎದ್ದರೆ ಇಡೀ ದಿನ ನೀವು ಉಲ್ಲಸಿತರಾಗಿರುತ್ತೀರಿ ಎನ್ನುತ್ತಾರೆ ವಿಜ್ಞಾನಿಗಳು

No comments:

Post a Comment