Sunday, 6 April 2014

ನಿದ್ರಾಹೀನತೆ ಹೆಚ್ಚಾದಾಗ ಬೆಳಗ್ಗೆಯೇ ಸುಸ್ತಾಗುವಂತಹ ಲಕ್ಷಣಗಳು ಕಂಡುಬರುತ್ತವೆ.

ಇತ್ತೀಚಿನ ಹೊಸ ಸಂಶೋಧನೆ ಪ್ರಕಾರ,
ಮಲಗುವ ಮುನ್ನ ಎಲೆಕ್ಟ್ರಾನಿಕ್
ಉಪಕರಣಗಳಾದ ಮೊಬೈಲ್, ಟ್ಯಾಬ್ಲೆಟ್,
ಟಿ.ವಿ, ಕಂಪ್ಯೂಟರ್ ಬಳಸುವುದರಿಂದ
ನಿದ್ದೆಗೆ ಭಂಗ ಬರುತ್ತಂತೆ. ಹೀಗಾಗಿ,
ವಿಶ್ವಾದ್ಯಂತ 28 ಮಿಲಿಯನ್ ಮಂದಿ
ನಿದ್ರಾಹೀನತೆ ಸಮಸ್ಯೆಯಿಂದ
ಬಳಲುತ್ತಿದ್ದಾರೆ ಅಂತಾರೆ
ಸಂಶೋಧಕರು. ಕನಿಷ್ಠ ಪಕ್ಷ 7
ಗಂಟೆಯೂ ನಿದ್ದೆ
ಮಾಡಲಾಗದೇ ನಾನಾ ಸಮಸ್ಯೆಗಳಿಗೆ
ತುತ್ತಾಗುತ್ತಿದ್ದಾರಂತೆ.
ಎಲೆಕ್ಟ್ರಾನಿಕ್ ಉಪಕರಣಗಳಿಂದ ನಿದ್ದೆಗೆ
ಭಂಗಬರುವುದು ಹೇಗೆ..?: ಎಲೆಕ್ಟ್ರಾನಿಕ್
ಉಪಕರಣಗಳಿಂದ ಹೊರಬರುವ ನೀಲಿ
ಬಣ್ಣದ ಲೈಟ್ ಆರೋಗ್ಯದ ಮೇಲೆ
ಪ್ರಮುಖ ಪರಿಣಾಮ ಬೀರುತ್ತಂತೆ. ಈ
ಲೈಟ್ ಮೆದುಳಿನಲ್ಲಿ ನಿದ್ರೆಗೆ
ಪ್ರೇರೇಪಿಸುವ ಮೆಲಟೋನಿನ್
(melatonin) ಹಾರ್ಮೋನ್ ಉತ್ಪಾದನೆಗೆ
ತೊಡಕುಂಟು ಮಾಡುತ್ತದೆಯಂತೆ.
ಇದರಿಂದಾಗಿ ಸರಿಯಾಗಿ ನಿದ್ದೆ
ಬಾರದೇ ಒದ್ದಾಡಬೇಕಾದ ಪರಿಸ್ಥಿತಿ
ಬರುತ್ತದೆ. ಇದರಿಂದಾಗಿ ಬೆಳಗ್ಗೆ ಏಳುವಾಗ
ಕಣ್ಣು ಮಂಜಾಗುವಿಕೆ ಕಂಡುಬರುತ್ತದೆ.
ನಿದ್ರಾಹೀನತೆ ಹೆಚ್ಚಾದಾಗ
ಬೆಳಗ್ಗೆಯೇ ಸುಸ್ತಾಗುವಂತಹ
ಲಕ್ಷಣಗಳು ಕಂಡುಬರುತ್ತವೆ.
ಕನಿಷ್ಠ ಪಕ್ಷ ಆರೋಗ್ಯಕ್ಕೆ ಅವಶ್ಯವಾದ 7
ಗಂಟೆಯಾದರೂ ನಿದ್ದೆ
ಮಾಡಲು ಸಾಧ್ಯವಾಗದಿದ್ದರೆ ತೂಕ
ಹೆಚ್ಚಾಗುವಿಕೆ, ಡಯಾಬಿಟಿಸ್,
ಹೃದಯಾಘಾತದಂತಹ
ಸಮಸ್ಯೆಗಳು ಎದುರಾಗುತ್ತವೆ
ಎನ್ನುತ್ತಾರೆ ಬ್ರಿಟನ್ನಿನ
ಹರ್ಟ್`ಫೋರ್ಡ್`ಶೇರ್ ವಿಶ್ವವಿದ್ಯಾಲಯದ
ತಜ್ಞರು.
ಇದುವರೆಗೆ ನಿದ್ರಾಹೀನತೆಯಿಂದ
ಬಳಲುತ್ತಿರುವ ಪ್ರತಿ 10 ಮಂದಿಯಲ್ಲಿ 8 ಜನ
ಎಲೆಕ್ಟ್ರಾನಿಕ್ ಉಪಕರಣಗಳನ್ನ
ಬಳಸಿಯೇ ಸಮಸ್ಯೆ
ಎದುರಿಸುತ್ತಿರುವುದು ಅಧ್ಯಯನದಿಂದ
ತಿಳಿದುಬಂದಿದೆ ಅಂತಾರೆ ತಜ್ಞರು.

No comments:

Post a Comment