ನಿದ್ದೆ
ಬರಲ್ಲವೆಂದುಕೊಳ್ಳಬೇಡಿ
ರಾತ್ರಿ ಲೇಟ್ ಆಗಿ
ಮಲಗಿದ್ದೇವೆಂದು ಬೆಳಗ್ಗೆ ಲೇಟ್ ಆಗಿ
ಏಳುವ ಪರಿಪಾಠಕ್ಕೆ ಶರಣಾಗಬೇಡಿ.
ನೀವು ಎಷ್ಟೇ ಹೊತ್ತಿಗೆ
ಮಲಗಿದರೂ ಬೆಳಗ್ಗೆ ನಿಮ್ಮ ಮಾಮೂಲಿಯ
ಸಮಯಕ್ಕೇ ಎಚ್ಚರಗೊಳ್ಳುವುದನ್ನ
ಮರೆಯಬೇಡಿ. ನೀವು ಮಾರನೇ ದಿನ
ರಾತ್ರಿ ಚೆನ್ನಾಗಿ
ನಿದ್ರಾ ಮಂಪರು ಬರುವವರೆಗೂ
ಮಲಗುವ
ಗೋಜಿಗೆ ಹೋಗಬೇಡಿ.
ಟಿವಿ, ಮ್ಯೂಸಿಕ್, ಹೆಂಡ ಬೇಡ...
ಟಿವಿ ಆನ್ ಮಾಡಿ ಸ್ಲೀಪಿಂಗ್ ಟೈಮರ್
ಇಟ್ಟು ಸಂಗೀತ
ಕೇಳಿಕೊಂಡು ಮಲಗುವ ಅಭ್ಯಾಸ
ಹಲವರಿಗೆ ಇರುತ್ತದೆ. ಹಾಗೆಯೇ, "ಎಣ್ಣೆ"
ಹೊಡೆದುಕೊಂಡು ನಿದ್ರೆಗೆ
ಜಾರುವವರ ಸಂಖ್ಯೆಯೂ ಬಹಳವಿದೆ.
ಆದರೆ,
ತಜ್ಞರು ಹೇಳುವ ಪ್ರಕಾರ
ನೀವು ಇಂಥ ಹುಚ್ಚುತನಗಳನ್ನ
ಮಾಡದಿರುವುದೇ ಲೇಸು. ಇಂಥ
ಅಭ್ಯಾಸಗಳಿಂದ ಮುಂದಿನ ದಿನಗಳಲ್ಲಿ
ಹೊಸ ತೊಂದರೆಗಳು ಕಾಡುವ
ಸಾಧ್ಯತೆ ಇರುತ್ತದೆ.
ನಿದ್ದೆ ಬರಲ್ಲವೆಂದುಕೊಳ್ಳಬೇಡಿ
ನಿದ್ರೆ ಬರುತ್ತಿಲ್ಲ
ಎಂದು ನೀವು ತಲೆಕೆಡಿಸಿಕೊಂಡರೆ ನಿದ್ರೆ
ನಿಮ್ಮ ಕೈಗೆಟುವುದೇ ಇಲ್ಲ. ಬೆಡ್'ಗೆ
ಹೋದ ಮೇಲೆ ಸ್ವಲ್ಪ ದೀರ್ಘ
ಉಸಿರಾಟವಾಡಿ ರಿಲ್ಯಾಕ್ಸ್ ಆಗಿ. ನಿಮಗೆ ನಿದ್ದೆ
ಬರುತ್ತಿಲ್ಲ ಎಂಬುದನ್ನ ತಲೆಯಿಂದ
ತೆಗೆದುಹಾಕಿ. ಆಗ ನಿದ್ದೆ ತನ್ನಿಂತಾನೆ ನಿಮ್ಮ
ವಶವಾಗುತ್ತದಂತೆ.
ನಾಳೆಯ ಚಿಂತೆ ಇದ್ದರೆ...
ಈಗಿನ ಕಾಲದಲ್ಲಿ
ಪ್ರತಿಯೊಬ್ಬರು ಸಾಮಾನ್ಯವಾಗಿ
ಬ್ಯುಸಿಯಾಗಿರುತ್ತಾರೆ. ರಾತ್ರಿ
ಲೇಟಾಗಿ ಮಲಗಿ ಬೆಳಗ್ಗೆ
ಬೇಗನೇ ದೌಡಿಯಿಸಬೇಕಾಗುತ್ತದೆ.
ನಾಳೆ ಏನು ಮಾಡಬೇಕೆಂಬ ಚಿಂತೆ
ಹಿಂದಿನ ರಾತ್ರಿಯೇ ಮನಸನ್ನ
ತುಂಬಿಬಿಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ
ನೀವು ಮಾಡಬೇಕಾದ ಸೂಕ್ತ
ಕೆಲಸವೇನೆಂದರೆ, ನಾಳೆಯ ದಿನಕ್ಕಾಗಿ
ರಾತ್ರಿಯೇ ಒಂದಷ್ಟು ಸಿದ್ಧತೆಗಳನ್ನ
ಮಾಡಿಕೊಳ್ಳಿ. ಆಗ, ನಿಮ್ಮ ಮನಸು ಸ್ವಲ್ಪ
ಹಗುರಗೊಂಡು ನಿದ್ರೆ
ಮಾಡಲು ಅವಕಾಶ ಸಿಗುತ್ತದೆ.
Wednesday, 16 April 2014
ನಿದ್ದೆ ಬರಲ್ಲವೆಂದುಕೊಳ್ಳಬೇಡ
Subscribe to:
Post Comments (Atom)
No comments:
Post a Comment