Tuesday, 22 April 2014

ಯಾವ ಗೋರಿಯ ಮೇಲೆ ಅರಳಿದ ಹೂವಿಗೂ ಹೆಣದ ವಾಸನೆ ಇರುವುದಿಲ್ಲ!

ನಿಮಗೊಂದು ಅಪರೂಪದ ಅವಕಾಶ
ಕೂಡಿಬಂದಿದೆ. ಬೆಂಗಳೂರಿನ
ಚಾಮರಾಜಪೇಟೆಯಲ್ಲಿರುವ ಜಿಂಕೆ
ಪಾರ್ಕ್ ಪಕ್ಕದ ಮಸಣದಲ್ಲಿ,
ಇದೇ ಭಾನುವಾರ
ಏ.27ರಂದು ಸಂಜೆ 4.30 ಗಂಟೆಗೆ
ಪುಸ್ತಕ ಬಿಡುಗಡೆಯ ಭಾಗ್ಯ
ಕಾಣುತ್ತಿದೆ. "ಸ್ಮಶಾನ ಅಂದ್ರೆ
ಅಂತ್ಯವಲ್ಲ, ಆರಂಭ" ಎಂದಿರುವ
ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್
ಅವರು ರಚಿಸಿರುವ 'ಖಾಲಿ ಶಿಲುಬೆ'
ಪಾಪಿಯೊಬ್ಬನ ಪ್ರೇಮ
ಪದ್ಯಗಳು ಬಿಡುಗಡೆಯಾಗುತ್ತಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮುಗಿಸಿಕೊಂಡು ಗಡಿಬಿಡಿಯಿಂದ
ಹೋಗುವ ಹಾಗೂ ಇಲ್ಲ. ಪುಸ್ತಕ
ಬಿಡುಗಡೆಗೆ
ಬಂದವರನ್ನು ಹಿಡಿದಿಟ್ಟುಕೊಳ್ಳಲು ನಾನಾ ಕಾರ್ಯಕ್ರಮಗಳನ್ನು ಕೂಡ
ಆಯೋಜಿಸಲಾಗಿದೆ. ಪಾಕಿಸ್ತಾನ
ಮೂಲದ ಖ್ಯಾತ ಹಿಂದೂಸ್ತಾನಿ
ಗಾಯಕ ಹರಿಕೃಷ್ಣ
ಪಾವಾಜೀ ಅವರಿಂದ ಸಲಾಫಿ,
ಕವ್ವಾಲಿ ಗಾಯನವಿದೆ.
ಅಂತಾರಾಷ್ಟ್ರೀಯ ಹಿಂದೂಸ್ತಾನಿ
ಗಾಯಕ ಸಮೀರ್ ಆತ್ರೇಯ
ಅವರಿಂದಲೂ ಹಾಡುಗಾರಿಕೆಯಿದೆ.
"ಯಾವ ಗೋರಿಯ ಮೇಲೆ ಅರಳಿದ
ಹೂವಿಗೂ ಹೆಣದ ವಾಸನೆ
ಇರುವುದಿಲ್ಲ!" ಎಂಬ ಟಿಪ್ಪಣಿಯಿರುವ
ಕವನ ಸಂಕಲನವನ್ನು ಹಿರಿಯ ಸಾಹಿತಿ
ಬೋಳುವಾರು ಮಹಮ್ಮದ್ ಕುಂಞ
ಅವರು ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಕವಿ, ವಿದ್ಯಾರ್ಥಿ
ಸಮರಜಿತ್ ಲಂಕೇಶ್
ಭಾಗವಹಿಸುತ್ತಿದ್ದಾರೆ. ಟೈಮ್ ಲೈನ್
ಕ್ರಿಯೇಷನ್ಸ್ ಈ ಪುಸ್ತಕ ಬಿಡುಗಡೆ
ಮಾಡುವ
ಜವಾಬ್ದಾರಿಯನ್ನು ಹೊತ್ತಿದೆ.
ಸ್ಮಶಾನದಲ್ಲಿ ಪುಸ್ತಕ ಬಿಡುಗಡೆಯಾ?
ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳದೆ,
ಹೆಚ್ಚು ಚಿಂತೆ ಮಾಡದೆ ಈ ಅಪರೂಪದ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.
ಸುಶ್ರಾವ್ಯವಾದ ಸಂಗೀತ ಆಲಿಸಿರಿ.
ಸ್ನೇಹಿತರನ್ನು ಕರೆದುಕೊಂಡು ಬಂದು ಇತರ
ಸ್ನೇಹಿತರಿಗೂ ಪರಿಚಯಿಸಿ. ಹಳೆ
ಸ್ನೇಹಿತರು,
ಬಂಧುಗಳು ಭೇಟಿಯಾದರೆ
ಆತ್ಮೀಯವಾಗಿ ಮಾತನಾಡಿಸಿ.
ಪ್ರೇತಾತ್ಮಗಳೇನಾದರೂ ಇದ್ದರೆ
ಅವಕ್ಕೂ ನಿಮ್ಮನ್ನು ಭೇಟಿಯಾಗುವ,
ಸಂಗೀತ ಕೇಳುವ ಅವಕಾಶ!

No comments:

Post a Comment