ಯಶಸ್ವಿಯಾದವರ
ಅನುಭವದ ಪ್ರಕಾರ ಬೆಳಗ್ಗಿನ ತಿಂಡಿ,
ಮಧ್ಯಾಹ್ನದ ಊಟ, ರಾತ್ರಿಯ
ಭೋಜನವನ್ನ ಹೇಗೆ
ಮಾಡಬೇಕೆಂದು ಸ್ಪಷ್ಟವಾಗಿ
ತಿಳಿಸಲಾಗಿದೆ.
ಬೆಳಗ್ಗಿನ ತಿಂಡಿ...
ಇದು, ಬಹುಶಃ ಎಲ್ಲಾ ಆಹಾರಕ್ಕಿಂತ
ಅತ್ಯಂತ ಮಹತ್ವವಾದದ್ದು. ಸ್ಲಿಮ್
ಆಗಬಯಸುವವರು ಬೆಳಗ್ಗಿನ ಉಪಾಹಾರವನ್ನ
ಅಪ್ಪಿತಪ್ಪಿಯೂ ತ್ಯಜಿಸಬಾರದು.
ನೀವೇನಾದರೂ ಬ್ರೇಕ್'ಫಾಸ್
ಕೈಬಿಟ್ಟರೆ ದೇಹದ ತೂಕ
ಹೆಚ್ಚಾಗುವುದರಲ್ಲಿ
ಅನುಮಾನವೇ ಇಲ್ಲ. ಬೆಳಗ್ಗೆ 7ರಿಂದ
7:30ರೊಳಗೆ ನೀವು ತಿಂಡಿ
ತಿಂದು ಮುಗಿಸಬೇಕು.
ಮಧ್ಯಾಹ್ನದ ಊಟ
ಈ ಮಧ್ಯಾಹ್ನದ ಊಟವೂ ಡಯೆಟಿಂಗ್'ನಲ್ಲಿ
ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯಾಹ್ನ
12:30ರಿಂದ 1ಗಂಟೆಯ ಒಳಗೆ ನೀವು ಊಟ
ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ರಾತ್ರಿಯ ಭೋಜನ
ಸಂಜೆ 7 ಗಂಟೆಯ ಒಳಗಾಗಿ ನೀವು ನಿಮ್ಮ
ಭೋಜನ ಮಾಡಿ ಮುಗಿಸಬೇಕಂತೆ. ಈ
ಭೋಜನ ಸಣ್ಣ
ಪ್ರಮಾಣದಲ್ಲಿರಬೇಕು ಎನ್ನುತ್ತಾರೆ.
ಯಾಕೆಂದರೆ, ರಾತ್ರಿಯ ಹೊತ್ತು ನಿಮ್ಮ
ದೈಹಿಕ ಚಟುವಟಿಕೆ
ಹೆಚ್ಚು ಇರುವುದಿಲ್ಲವಾದ್ದರಿಂದ ಕಡಿಮೆ
ಕೊಬ್ಬಿನಾಂಶವಿರುವ ಆಹಾರವನ್ನ
ತೆಗೆದುಕೊಳ್ಳಬೇಕು.
ಸರಿಯಾದ ಟೈಂಟೇಬಲ್
ತಿಂಡಿ: ಬೆಳಗ್ಗೆ 7:11
ಮಧ್ಯಾಹ್ನದ ಊಟ: ಮಧ್ಯಾಹ್ನ 12:38
ರಾತ್ರಿಯ ಭೋಜನ: ಸಂಜೆ 6:14
ಮೊದಲೇ ಹೇಳಿದಂತೆ, ಡಯೆಟಿಂಗ್
ಮಾಡಿ ಯಶಸ್ವಿಯಾದವರ ಅನುಭವದ
ಪ್ರಕಾರ ಈ ನಿಖರ ಸಮಯವನ್ನ
ಗುರುತಿಸಲಾಗಿದೆ. ಹೆಚ್ಚು ಕೊಬ್ಬಿಲ್ಲದ
ಆಹಾರವನ್ನ ಈ ಸಮಯಗಳಲ್ಲಿ
ನೀವು ದಿನನಿತ್ಯ ಸೇವಿಸುತ್ತಾ ಬಂದಲ್ಲಿ
ನಿಮ್ಮ ದೇಹತೂಕ ಗಮನಾರ್ಹ ರೀತಿಯಲ್ಲಿ
ಇಳಿಕೆಯಾಗುವುದರಲ್ಲಿ
ಅನುಮಾನವೇ ಇಲ್ಲವಂತೆ.
Wednesday, 2 April 2014
ಭೋಜನ ಸಣ್ಣ ಪ್ರಮಾಣದಲ್ಲಿರಬೇಕು ಎನ್ನುತ್ತಾರೆ. ಯಾಕೆಂದರೆ,
Subscribe to:
Post Comments (Atom)
No comments:
Post a Comment