ತಲೆಗೂದಲು ಬೆಳೆದಿಲ್ಲವೆಂದು ಚಿಂತೆ ಮಾಡಿ
ವ್ಯಾಕುಲದಿಂದಿರುವವರ ಸಂಖ್ಯೆ ಬಹಳ
ಹೆಚ್ಚು. ಆದರೆ, ನ್ಯೂಜಿಲೆಂಡ್'ನ
ಸಂಶೋಧಕರು ಅಚ್ಚರಿಯ ವಿಷಯವನ್ನ
ಹೊರಗೆಡವಿದ್ದಾರೆ. ಬೋಳಾದ ತಲೆಯವರ
ಬುದ್ಧಿಮತ್ತೆ ಗಮನಾರ್ಹ ರೀತಿಯಲ್ಲಿ
ಹೆಚ್ಚಾಗುತ್ತದಂತೆ.
ತಲೆಕೂದಲು ಬೋಳಿಸಿಕೊಂಡಾಗ
ಗಂಡಸರ ಬುದ್ಧಿಮತ್ತೆಯಲ್ಲಿ 10
ಪಾಯಿಂಟುಗಳಷ್ಟು ಏರಿಕೆ ಆಗುತ್ತದೆ
ಎಂದು ಕರಿಲ್ಯಾಡ್ ವಿಶ್ವವಿದ್ಯಾಲಯದ
ಸಂಶೋಧಕರು ಹೇಳಿದ್ದಾರೆ.
ಬಾಲ್ಡಿಯಾಗಿದ್ದವರು ಕೂದಲು ಬೆಳೆಸುವ
ಗೋಜಿಗೆ
ಹೋಗದಿರುವುದೇ ಲೇಸು.
ಅಷ್ಟೇ ಅಲ್ಲ,
ಸಮೃದ್ಧಕೂದಲು ಹೊಂದಿರುವ
ವ್ಯಕ್ತಿಗಳು ತಲೆಬೋಳಿಸಿಕೊಳ್ಳುವ
ಟ್ರೆಂಡ್ ಶುರುವಾಗುವ
ದಿನಗಳು ದೂರವಿಲ್ಲ.
ಸುಮಾರು 400 ಪುರುಷರ ಮೇಲೆ
ಅಧ್ಯಯನ ಮಾಡಿ ಈ ವಿಷಯವನ್ನ
ದೃಢಪಡಿಸಲಾಗಿದೆ. ಅಧ್ಯಯನಕ್ಕೊಳಗಾದ
ವ್ಯಕ್ತಿಗಳು ತಲೆಗೂದಲಿದ್ದವರೇ ಆಗಿದ್ದರು.
ತಲೆಗೂದಲು ಇದ್ದಾಗ ಅವರ ಬುದ್ಧಿಮತ್ತೆ
ಪರೀಕ್ಷೆ (ಐಕ್ಯೂ ಟೆಸ್ಟ್) ಮಾಡಿ
ಅಂಕಿಅಂಶವನ್ನ ದಾಖಲಿಸಲಾಯಿತು. ಬಳಿಕ,
ಅವರ ತಲೆ ಬೋಳಿಸಿದ
ನಂತರವೂ ಮತ್ತೊಮ್ಮೆ ಪರೀಕ್ಷೆ
ಮಾಡಲಾಯಿತು. ಅದಾದ ನಂತರ, ಆ
ವ್ಯಕ್ತಿಗಳು ಮತ್ತೊಮ್ಮೆ
ತಲೆಗೂದಲು ಬೆಳೆಸಿಕೊಳ್ಳುವಂತೆ
ಹೇಳಲಾಯಿತು. ಆಗಲೂ ಐಕ್ಯೂ ಟೆಸ್ಟ್
ಮಾಡಲಾಯಿತು.
ತಲೆಬೋಳಿಸಿಕೊಂಡಾಗ
ಬುದ್ಧಮತ್ತೆಯಲ್ಲಿ 10 ಪಾಯಿಂಟ್ ಹೆಚ್ಚಳ
ಕಂಡುಬಂತು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕೂದಲಿದ್ದರೆ ಏನು ಕಷ್ಟ..?
ತಲೆಯಲ್ಲಿ ಕೂದಲು ಇದ್ದರೆ
ಮಿದುಳಿನಲ್ಲಿರುವ ನರಗಳ ಮೇಲೆ ಅನಗತ್ಯ
ಒತ್ತಡ ಬೀಳುತ್ತದೆ. ಇದರಿಂದ ಮಿದುಳಿನ
ಕಾರ್ಯಚಟುವಟಿಕೆಗೆ ಸ್ವಲ್ಪ
ತೊಡಕು ಉಂಟಾಗುತ್ತದೆ
ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ತಿರುಪತಿ ದೇವಸ್ಥಾನದವರ ಹೇಳಿಕೆ..!
ಬೋಳುತಲೆ ಇದ್ದರೆ ಬುದ್ಧಿಮತ್ತೆ
ಹೆಚ್ಚಾಗುತ್ತೆ ಎಂದು ಹೇಳುತ್ತಿರುವ ಈ
ಸಂಶೋಧನೆಯನ್ನ ಭಾರತದ ಧಾರ್ಮಿಕ
ಸಂಘಟನೆಗಳು ಸ್ವಾಗತಿಸಿವೆ. ನಮ್ಮ
ಧರ್ಮಶಾಸ್ತ್ರಗಳಲ್ಲಿ ಮುಡಿಕೊಡುವ
ಪದ್ಧತಿಯನ್ನ ಸುಮ್ಮನೆ ಮಾಡಿಲ್ಲ.
ಅದಕ್ಕೆಲ್ಲಾ ವೈಜ್ಞಾನಿಕ ಆಧಾರವಿದೆ.
ಇದು ಈ ಸಂಶೋಧನೆಯಿಂದ
ಮತ್ತೊಮ್ಮೆ ಸಾಬೀತಾಗಿದೆ
ಎಂದು ತಿರುಪತಿ ದೇವಸ್ಥಾನದ
ಅಧಿಕಾರಿಗಳು ಪ್ರತಿಕ್ರಿಯಿಸಿರುವುದು ವರದಿಯಾಗಿದೆ.
Saturday, 19 April 2014
ಬೋಳಾದ ತಲೆ ಇದ್ದರೆ ಬುದ್ಧಿಮತ್ತೆ ಹೆಚ್ಚಾಗುತ್ತೆ..!
Subscribe to:
Post Comments (Atom)
ಶಿವರಾಜ್ ಅವರೇ ತುಂಬ ಚೆನ್ನಾಗಿದೆ. ನಮ್ಮದೊಂದು ಕನ್ನಡ ಬ್ಲಾಗ್ ಇದೆ.ಈ ಪೋಸ್ಟನ್ನು ಆ ಬ್ಲಾಗಿನಲ್ಲಿ ಹಾಕಿದ್ದೀನಿ. ನೋಡಿ ಆಶೀರ್ವದಿಸಿ.
ReplyDeletehttp://sillyconkannadiga.wordpress.com/
Delete