Tuesday, 22 April 2014

ಹುಟ್ಟು ಹಬ್ಬದ ಶುಭಾಶಯಗಳು.. ನೆಚ್ಚಿನ ಡಾ|| ರಾಜ್ ಕುಮಾರ್ ರವರಿಗೆ.

ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ
ನಟಿಸುವ ಮುನ್ನ ಡಾ.ರಾಜ್ ಅವರ
ಹೆಸರು ಮುತ್ತುರಾಜ ಎಂದಿತ್ತು.
ಮುತ್ತುರಾಜನ ತಂದೆ
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
ನವರು ಎಂದರೆ ೧೯೩೦-೧೯೫೦ ಕಾಲದಲ್ಲಿ
ಕನ್ನಡ ರಂಗಭೂಮಿಯ ದೊಡ್ಡ ಹೆಸರು.
ರೌದ್ರ ಪಾತ್ರಗಳಿಗೆ ಹೆಸರಾಗಿದ್ದ
ಪುಟ್ಟಸ್ವಾಮಯ್ಯನವರು ಗುಬ್ಬಿ
ಕಂಪನಿ ಯಲ್ಲಿ ಕಲಾವಿದರಾಗಿದ್ದರು.
ಬಡತನದಿಂದಾಗಿ ಮುತ್ತುರಾಜ್
ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ
ನಿಂತಿತು. ಗುಬ್ಬಿ ಕಂಪನಿಯೇ ವಿಶ್ವ
ವಿದ್ಯಾನಿಲಯವಾಯಿತು.
ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ
ಮುತ್ತುರಾಜ್ಗೆ
ಅವರಿಂದಲೇ ತರಬೇತಿಯಾಯಿತು.
ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ
ನಿರ್ವಹಿಸುತ್ತಿದ್ದರು.
ಡಾ.ರಾಜ್ಕುಮಾರ್ ಜೀವನದಲ್ಲಿ ತಂದೆ
ಬೀರಿರುವ ಪ್ರಭಾವ ಅಪಾರ. ಫಾಲ್ಕೆ
ಪ್ರಶಸ್ತಿ ಪ್ರಕಟವಾದಾಗ
ಅವರು ಮೊದಲು ನೆನಪಿಸಿಕೊಂಡದ್ದು ತ
ಂದೆ ಹೇಳಿದ ಮಾತುಗಳನ್ನೇ : "ಇಂತಹ
ಸಾಧನೆ ನಿನ್ನಿಂದ ಸಾಧ್ಯ"
ಎಂದು ಪುಟ್ಟಸ್ವಾಮಯ್ಯನವರು ಮಗನ
ಭವಿಷ್ಯವನ್ನು ಅಂದೇ ನುಡಿದಿದ್ದರು.
ಅದು ನಿಜವಾಯಿತು. "ನನ್ನ ತಂದೆ ರಂಗದ
ಮೇಲೆ ಹುರಿ ಮೀಸೆ ತಿರುಗಿಸುತ್ತಾ,
ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ
ಎಂತಹವರಿಗೂ ಒಂದು ಬಾರಿ ನಡುಕ
ಬರುತ್ತಿತ್ತು" ಎಂದು ತಂದೆಯವರ
ಅಭಿನಯವನ್ನು ಬಣ್ಣಿಸುವ ರಾಜ್ಕುಮಾರ್
ಅವರಿಗೆ ತಂದೆಯ ಅಭಿನಯ ಬಲು ಪ್ರಿಯ.
"ನಾನೂ ಅದೇ ರೀತಿ ಮಾಡಬೇಕೆಂದು
ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ
ಕಶಿಪು ಪಾತ್ರದಲ್ಲಿ ಅವರಂತೆ
ಅಭಿನಯಿಸಲು ಸಾಧ್ಯವೇ ಎಂದು ಪ್ರಯ
ತ್ನಿಸಿದೆ; ಆದರೆ ಬರಲಿಲ್ಲ"
ಎಂದು ಹೇಳಿದ್ದಾರೆ.
ಗುಬ್ಬಿ ಕಂಪನಿಯಲ್ಲಿ
ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿ
ದ್ದಾಗ ಮುತ್ತುರಾಜುವಿಗೆ
"ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ
ಪಾತ್ರ ದೊರಕಿತು. ಕೆಲ ದಿನಗಳ ನಂತರ
ಪುಟ್ಟಸ್ವಾಮಯ್ಯ ನವರು ಗುಬ್ಬಿ
ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ
ನಾಯ್ಡು ಅವರ ಶ್ರೀ ಸಾಹಿತ್ಯ
ಸಾಮ್ರಾಜ್ಯ ನಾಟಕ ಮಂಡಲಿ ಗೆ
ಸೇರಿದಾಗ ಅಕಸ್ಮಾತ್ತಾಗಿ
ಮುತ್ತುರಾಜ್ಗೆ "ಅಂಬರೀಷ" ನಾಟಕದಲ್ಲಿ
ಅಂಬರೀಷನ ತಮ್ಮ ರಮಾಕಾಂತನ ಪಾತ್ರ
ದೊರಕಿತು. ಅನಂತರ "ಕುರುಕ್ಷೇತ್ರ"
ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ
ಮಗ ಅರ್ಜುನನ ಪಾತ್ರ. ರಾಜ್ಕುಮಾರ್ಗೆ
ಇದು ರಂಗತಾಲೀಮು.
೧೯೫೧ರಲ್ಲಿ ತಂದೆ
ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ
ಅಘಾತದಿಂದ ತತ್ತರಿಸಿದ ಮುತ್ತುರಾಜ್,
ಮತ್ತೆ ಗುಬ್ಬಿ ಕಂಪನಿ ಸೇರಿ
"ಭೂ ಕೈಲಾಸ" ನಾಟಕದಲ್ಲಿ
ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ,
ಶ್ರೀ ಸಾಹಿತ್ಯ ಮಂಡಲಿ,
ಶೇಷಾಚಾರ್ಯರ ಶೇಷಕಮಲ ನಾಟಕ
ಮಂಡಳಿಯಲ್ಲಿಯೂ ರಾಜ್ಕುಮಾರ್
ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಚಿತ್ರರಂಗಕ್ಕೆ ನಾಯಕನಾಗಿ
ಪಾದಾರ್ಪಣೆ
೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ
ಚಿತ್ರದಲ್ಲಿ ಬಾಲನಟನಾಗಿಯೂ, ೧೯೫೨ರಲ್ಲಿ
ಬಿಡುಗಡೆಯಾದ ಶಂಕರ್ಸಿಂಗ್ ನಿರ್ದೇಶನದ
ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ
ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ
ಮುತ್ತುರಾಜ್, ರಂಗಭೂಮಿಯಲ್ಲಿ
ಸಕ್ರಿಯರಾಗಿದ್ದರು.
೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ
ಮುತ್ತುರಾಜ್ ದಂಪತಿಗಳು
ನಂಜನಗೂಡಿನಿಂದ ಮೈಸೂರಿಗೆ
ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು.
ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ
ಮೈಸೂರಿಗೆ ಹೋಗಲು ಅಲ್ಲಿಗೆ
ಬಂದಿದ್ದರು.
ಅವರು ಮುತ್ತುರಾಜ್ರವರನ್ನು ಚಿಕ್ಕಂದಿನಿ
ಂದ ನೋಡಿದ್ದರು. ಅಂದು ರೈಲ್ವೆ
ನಿಲ್ದಾಣದಲ್ಲಿ ಆ
ದಂಪತಿಗಳನ್ನು ಕಂಡು ಪ್ರೀತಿಯಿಂದ
ಮಾತನಾಡಿಸಿ, ಯೋಗಕ್ಷೇಮ
ವಿಚಾರಿಸಿದರು. ಸಿಂಹ ಕಣ್ಣಪ್ಪನ ಪಾತ್ರಕ್ಕೆ
ಹೊಸನಟನನ್ನು ಹುಡುಕುತ್ತಿದ್ದ ಸಮಯ.
ಅಂದು ಕಟ್ಟುಮಸ್ತಾದ
ಆಳು ಮುತ್ತರಾಜ್ರವರನ್ನು ಕಂಡ ತಕ್ಷಣ
"ಇವನನ್ನೇ ಕಣ್ಣಪ್ಪನಾಗಿ ಏಕೆ
ಮಾಡಬಾರದು" ಎಂಬ ಭಾವನೆ
ಮೂಡಿತ್ತು. ಮುತ್ತುರಾಜ್ ಬಳಿ
ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ
ಕೋರಿ ಸಿಂಹ ಬೀಳ್ಕೊಟ್ಟಿದ್ದರು.
ಮೇಲಿನ ಘಟನೆ ನಡೆದ ಕೆಲದಿನಗಳಲ್ಲಿ
ಮೈಸೂರಿನ ಟೌನ್ಹಾಲಿನಲ್ಲಿ ಬೇಡರ
ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ
ಮುತ್ತುರಾಜ್ ಕಣ್ಣಪ್ಪನ ಪಾತ್ರ
ವಹಿಸುತ್ತಾರೆ ಎಂದು ಸಿಂಹ ರವರಿಗೆ
ತಿಳಿಯಿತು. ಆ ದಿನ, ಅರ್ಧಗಂಟೆ ನಾಟಕ
ನೋಡಿ, ಮುತ್ತುರಾಜ್ರವರ ತನ್ಮಯತೆಯ
ಅಭಿನಯ ಕಂಡು ಸಿಂಹ
ಸಂತೋಷಪಟ್ಟರು. ಗುಬ್ಬಿ ಕರ್ನಾಟಕ
ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ
ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ
ಈತನೇ ಸರಿಯಾದ ವ್ಯಕ್ತಿ
ಎಂದುಕೊಂಡು ನಿರ್ಮಾಪಕ
ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ,
ಆ ಚಿತ್ರದ ಸಹನಿರ್ಮಾಪಕರಾಗಿದ್ದ ಗುಬ್ಬಿ
ವೀರಣ್ಣ ನವರಿಗೆ ಈ ವಿಷಯ ತಿಳಿಸಿ
ಅವರನ್ನು ಒಪ್ಪಿಸಿದರು. ನಂತರ
ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು
ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್
ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.
ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ
ಮುತ್ತುರಾಜ್ಗೆ ರಾಜಕುಮಾರ್ ಎಂಬ
ಹೊಸ ಹೆಸರಿನ ನಾಮಕರಣವಾಯಿತು.
ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ
ನಾಯಕನಾಗಿ ಅಭಿನಯಿಸಿದರು. ಚಿತ್ರವು
೧೯೫೪ರ ಮೇ ತಿಂಗಳಲ್ಲಿ ಆಗಿನ
ಮೈಸೂರು ರಾಜ್ಯದಲ್ಲಿ ಎಲ್ಲೆಡೆ
ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ
ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ
ಚಿತ್ರವಾಗಿ ಕನ್ನಡ
ಚಿತ್ರರಂಗ ದಲ್ಲಿಯೇ ಒಂದು ಮೈಲಿಗಲ್ಲ
ಾಯಿತು.
ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ
ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ಅವರು
ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ " ಈ
ಉದ್ದ ಮೂಗಿನ
ಮತ್ತು ಹಲ್ಲು ಹುಬ್ಬು ಇರುವವರನ್ನು ಹ
ಾಕಿಕೊಂಡು ಏನು ಚಿತ್ರ
ಮಾಡುತ್ತೀಯ ಎಂದು ಕೇಳಿದ್ದರಂತೆ.
ಆದರೆ ಹೆಚ್.ಎಲ್.ಎನ್.ಸಿಂಹ
ಅವರು ನಿರ್ಮಾಪಕರಿಗೆ
ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ
ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.
ಚಿತ್ರರಂಗದ ಬದುಕು
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ
ನಟನಾಗಿ ಅಭಿನಯಿಸಲು ಪ್ರಾರಂಭಿಸಿದ
ರಾಜಕುಮಾರ್, ಭಕ್ತ ವಿಜಯ , ಹರಿಭಕ್ತ ,
ಓಹಿಲೇಶ್ವರ , ಭೂಕೈಲಾಸ, ಭಕ್ತ
ಕನಕದಾಸ, ನವಕೋಟಿ ನಾರಾಯಣ(ಭಕ್ತ
ಪುರಂದರದಾಸ) ಮುಂತಾದ ಭಕ್ತಿ
ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦
ಚಿತ್ರಗಳಲ್ಲಿ ನಾಯಕ ನಾಗಿ ಅಭಿನಯಿಸಿದ
ಕನ್ನಡದ ಏಕೈಕ ಕಲಾವಿದರು. ೧೯೬೦ರ
ದಶಕದಲ್ಲಿ, ಕಣ್ತೆರೆದು ನೋಡು,
ಗಾಳಿಗೋಪುರ, ನಂದಾದೀಪ,
ಸಾಕು ಮಗಳು, ನಾಂದಿ ಮುಂತಾದ
ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ
ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ
ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ
ಮುಂತಾದ ಐತಿಹಾಸಿಕ ಚಿತ್ರಗಳು ರಾಜ್
ಅಭಿನಯದಲ್ಲಿ ತೆರೆ ಕಂಡವು. ೧೯೬೬ರಲ್ಲಿ
ಬಿಡುಗಡೆಯಾದ ಸಂಗೀತ ಪ್ರಧಾನ
ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ
ಸಂಗೀತ ಗಾರನಾಗಿ ನಟಿಸಿದ ರಾಜ್ ಅವರ
ಅಭಿನಯಕ್ಕೆ ಭಾರತದ ಹೆಸರಾಂತ
ಶಾಸ್ತ್ರೀಯ ಗಾಯಕರಾದ
ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್
ಭೀಮಸೇನ ಜೋಷಿ
ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ
ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ
ರಾಜ್ಕುಮಾರ್ ಶ್ರೀ ರಾಘವೇಂದ್ರ
ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ
ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ
ಬದುಕಿನಲ್ಲಿ ಮಿಕ್ಕೆಲ್ಲ
ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ
ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ
ತಿಳಿಸಿದ್ದಾರೆ. ೧೯೬೮ರಲ್ಲಿ ಬಿಡುಗಡೆಯಾದ
ಜೇಡರ ಬಲೆ ಎಂಬ ಚಿತ್ರದ ಮೂಲಕ
ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ
ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ
ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ
ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯)
ಅಭಿನಯಿಸಿದರು. ಈ ಸರಣಿಯಲ್ಲಿನ ಇತರ
ಚಿತ್ರಗಳು ಆಪರೇಷನ್ ಜಾಕ್ಪಾಟ್ನಲ್ಲಿ
ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯
ಹಾಗು ಆಪರೇಷನ್ ಡೈಮಂಡ್ ರ್ಯಾಕೆಟ್ .
ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ
ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.
ರಾಜ್ಕುಮಾರ್ ಅವರ ನೂರನೇ ಚಿತ್ರವಾದ
ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ
ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ
ನಟಸಾರ್ವಭೌಮ ಎಂಬ ಬಿರುದನ್ನು ನೀಡಿ
ಗೌರವಿಸಲಾಯಿತಲ್ಲದೆ, ಅದೇ ಹೆಸರಿನ
ಚಲನಚಿತ್ರವೂ ( ನಟಸಾರ್ವಭೌಮ ) ಕೂಡ
ತಯಾರಾಯಿತು. ಈ
ಚಿತ್ರವು ರಾಜ್ಕುಮಾರ್ ಅವರ ಹಿಂದಿನ
ನೂರು ಚಿತ್ರಗಳ
ತುಣುಕು ದೃಶ್ಯಗಳನ್ನು ಜೊತೆಗೂಡಿಸಿ
ತಯಾರಿಸು ವ ಯೋಜನೆಯೊಂದಿಗೆ
ಪ್ರಾರಂಭವಾದರೂ, ಸ್ಥಳಾವಕಾಶದ
ಕೊರತೆಯಿಂದ ಕೆಲವು ಚಿತ್ರಗಳ
ತುಣುಕುಗಳನ್ನು ಕೈಬಿಡಲಾಗಿದೆ.
೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ
ನಿವಾಸ ಮತ್ತು ಸಾಕ್ಷಾತ್ಕಾರ
ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಲಲ್ಲಿ
ಮುಖ್ಯವಾದವು. ಈ ಚಿತ್ರಗಳಲ್ಲಿನ
ಆಡಿಸಿನೋಡು ಬೀಳಿಸಿ ನೋಡು ಉರುಳಿ
ಹೋಗದು ಹಾಗು ಒಲವೆ ಜೀವನ
ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ
ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.
ರಾಜ್ಕುಮಾರ್ ಅವರನ್ನು ಖ್ಯಾತಿಯ
ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ
ತೆರೆಕಂಡ ಬಂಗಾರದ ಮನುಷ್ಯ .
ಚಿತ್ರಮಂದಿರದಲ್ಲಿ ಸತತವಾಗಿ
ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ
ಪ್ರದರ್ಶನಗೊಂಡು ಹೊಸ
ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ
ಕನ್ನಡ ಚಿತ್ರರಂಗದಲ್ಲಿ
ಇಂದಿಗೂ ಅಚ್ಚಳಿಯದೇ ನಿಂತಿದೆ. ಈ
ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ
ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ
ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ
ಹೆಸರು ಪಡೆಯಿತು. ರಾಜ್ಕುಮಾರ್ ಅವರ
ನೂರೈವತ್ತನೇ ಚಿತ್ರ, ೧೯೭೩ರಲ್ಲಿ
ತೆರೆಕಂಡ, ಗಂಧದ ಗುಡಿ . ರಾಜ್
ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ
ಚಿತ್ರದಲ್ಲಿ ಕನ್ನಡ ಚಿತ್ರರಂಗ ದ ಮತ್ತೊಬ್ಬ
ಖ್ಯಾತ ನಟರಾದ ವಿಷ್ಣುವರ್ಧನ್
ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ
ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ
ಮನೋಜ್ಞ ಮತ್ತು ಅತ್ಯಂತ
ಭಾವಪೂರ್ಣ ಎಂದು ವಿಮರ್ಶಕರ
ಅಭಿಪ್ರಾಯ. ಇದೇ ವರ್ಷ ಬಿಡುಗಡೆ ಯಾದ
ಸಂಪತ್ತಿಗೆ ಸವಾಲ್ ಚಿತ್ರದ
ಯಾರೇ ಕೂಗಾಡಲಿ,
ಊರೇ ಹೋರಾಡಲಿ ಹಾಡಿನ ಮೂಲಕ
ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ
ಮುಂದಿನ
ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿ
ಸಿದರು. ೧೯೭೫ರಲ್ಲಿ ಬಿಡುಗಡೆಯಾದ
ಮಯೂರ ಚಲನಚಿತ್ರವು ಕನ್ನಡದ ಪ್ರಥಮ
ದೊರೆ ಕದಂಬರ
ಮಯೂರವರ್ಮರನ್ನಾಧರಿಸಿದೆ. ಈ
ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ,
ನಾಡಿರುವುದೆ ನಮಗಾಗಿ ಗೀತೆಯು ರಾಜ್
ಗಾಯನದಲ್ಲಿನ ಅತ್ಯಂತ ಜನಪ್ರಿಯ
ಗೀತೆಗಳಲ್ಲೊಂದು. ೧೯೭೬ರಲ್ಲಿ
ಮೈಸೂರು ವಿಶ್ವವಿದ್ಯಾಲವು ರಾಜ್ಕು
ಮಾರ್ ಅವರಿಗೆ ಗೌರವ ಡಾಕ್ಟರೇಟ್
ಪದವಿಯನ್ನು ನೀಡಿ ಗೌರವಿಸಿತು. ೧೯೭೭ರಲ್ಲಿ
ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ,
ಡಾ.ರಾಜ್ ಶಹನಾಯಿ ವಾದಕರಾಗಿ
ಅಭಿನಯಿಸಿದರು. ಈ ಚಿತ್ರಕ್ಕೆ
ಅವಶ್ಯಕವಾಗಿದ್ದ ಶಹನಾಯಿ
ವಾದನವನ್ನು ನುಡಿಸಿ ದವರು ಭಾರತದ
ಪ್ರಖ್ಯಾತ ಶಹನಾಯಿ ವಾದಕರಾದ
ಉಸ್ತಾದ್ ಬಿಸ್ಮಿಲ್ಲಾ ಖಾನ್.
ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ
ಎಸ್.ಜಾನಕಿ ಯವರು ಹಾಡಿರುವ
ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ
ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ
ಡಾ.ರಾಜ್ ಅಭಿನಯಿಸಿದ್ದಾರೆ. ೧೯೮೦ರ
ದಶಕದಲ್ಲಿ ಸದಭಿರುಚಿಯ ಸಾಮಾಜಿಕ
ಚಿತ್ರಗಳಾದ ಹಾಲುಜೇನು , ಚಲಿಸುವ
ಮೋಡಗಳು, ಹೊಸ ಬೆಳಕು, ಶ್ರಾವಣ
ಬಂತು , ಅನುರಾಗ ಅರಳಿತು , ಶ್ರುತಿ
ಸೇರಿದಾಗ ಮುಂತಾದ ಯಶಸ್ವಿ
ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ
ಡಾ.ರಾಜ್ ಅವರು ಅನಂತ್ ನಾಗ್
ಅವರೊಂದಿಗೆ ಕಾಮನಬಿಲ್ಲು
ಚಿತ್ರದಲ್ಲಿಯೂ, ಶಂಕರ್ ನಾಗ್
ಅವರೊಂದಿಗೆ ಅಪೂರ್ವ ಸಂಗಮ
ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್
ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ
ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ
ಡಾ.ರಾಜ್ ನಟಿಸಿದ್ದಾರೆ. ತಮ್ಮ
ಯೋಗಾಸನಗಳಿಗೆ ಹೆಸರಾಗಿದ್ದ ಡಾ.ರಾಜ್
ಅವರ ವಿವಿಧ ಯೋಗಾಸನಗಳ ಭಂಗಿಗಳು
ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ
ಮೇಲೂ ಮೂಡಿಬಂದಿದೆ. ೧೯೮೩ರಲ್ಲಿ
ಬಂದಂತಹ ಕವಿರತ್ನ ಕಾಳಿದಾಸ, ಡಾ.ರಾಜ್
ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ
ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ
ಕುರುಬನಾಗಿಯೂ, ಮಹಾಕವಿಯಾದ
ಕಾಳಿದಾಸನಾಗಿಯೂ, ದುಷ್ಯಂತ
ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ
ರಾಜ್ ಜೀವ ತುಂಬಿದ್ದಾರೆ. ಈ
ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ
ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ
ಡಾ.ರಾಜ್ ಅಮೋಘ ಅಭಿನಯದ
ಕೊಡುಗೆ
ಮುಖ್ಯವಾದುದೆಂದು ವಿಮರ್ಶಕರ
ಅಭಿಪ್ರಾಯ. ಡಾ.ರಾಜ್ ಅವರ
ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ
ದೇವತಾ ಮನುಷ್ಯ . ಈ ಚಿತ್ರದಲ್ಲಿ ಕನ್ನಡ
ಚಿತ್ರರಂಗದ ಹೆಸರಾಂತ
ನಟಿಯರೊಲ್ಲೊಬ್ಬರಾದ ಸುಧಾರಾಣಿ
ಯವರು ಡಾ.ರಾಜ್ ಅವರ ಪುತ್ರಿಯಾಗಿ
ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ
ಜನಪ್ರಿಯ ನಾಯಕ ನಟರಾದ ಅಂಬರೀಶ್
ಅವರ ಸಹೋದರನಾಗಿ ಒಡಹುಟ್ಟಿದವರು
ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್,
ಸಾಮಾಜಿಕ ಕಳಕಳಿಯ ಚಿತ್ರಗಳತ್ತ
ಒಲವು ತೋರಿದ್ದರು. ಜೀವನ ಚೈತ್ರ
ಚಿತ್ರದ ಮೂಲಕ ಸಾರಾಯಿ ಪಿಡುಗಿನ
ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ
ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ
ಮೂಲಕ ಮಾದಕ ವ್ಯಸನಗಳ ವಿರುದ್ಧ
ಹೋರಾಡುವ ಪಾತ್ರದಲ್ಲಿ ಡಾ.ರಾಜ್
ಅಭಿನಯಿಸಿದರು. ಡಾ.ರಾಜ್ಕುಮಾರ್
ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ
೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ
ಅಂಬರೀಶ ಎಂಬ ಚಿತ್ರದಲ್ಲಿ
ನಟಿಸಬೇಕೆಂಬ ಹಂಬಲವನ್ನು ರಾಜ್
ಹಲವಾರು ಬಾರಿ
ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ
ಕಾರಣ ಅದು ಸಾಧ್ಯವಾಗಲಿಲ್ಲ.
ಬೆಳ್ಳಿತೆರೆಯ ಮೇಲೆ ಡಾ.ರಾಜ್
ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ
ತಮ್ಮ ಪುತ್ರ ಶಿವರಾಜ್ಕುಮಾರ್
ನಾಯಕತ್ವದಲ್ಲಿನ ಜೋಗಿ . ಚಿತ್ರದ ಆರಂಭದ
ದೃಶ್ಯದಲ್ಲಿ ನಾಯಕನ ಜೋಳಿಗೆಗೆ
ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.
ಸುಮಾರು ೨೦೬ ಚಿತ್ರಗಳಲ್ಲಿ
ನಾಯಕನಟರಾಗಿ ನಟಿಸಿರುವ ರಾಜ್
ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ
ನಟಿಸಿದ್ದಾರೆ, ಅವೆಂದರೆ "ಅಣ್ಣ
ತಂಗಿ","ಮುರಿಯದ ಮನೆ" ,"ವಾತ್ಸ ಲ್ಯ",
"ಮನಸಾಕ್ಷಿ", "ಬಾಳ ಬಂದನ" ,"ನನ್ನ
ತಮ್ಮ", "ಭಾಗ್ಯವಂತರು", "ಅಪೂರ್ವ
ಸಂಗಮ" ಮುಂತಾದವುಗಳು.
ಅಲ್ಲಿಯೂ ಅವರು ಮೂಲ
ನಟರನ್ನು ಅನುಕರಿಸದೆ
ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ.
"ಬೇಡರ ಕಣ್ಣಪ್ಪ" ತೆಲುಗಿನಲ್ಲಿ
‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ
ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ
ಡಾ. ರಾಜ್ ಕುಮಾರ್ ಹೀರೊ ಆಗಿ
ನಟಿಸಿದರು. ರಾಜ್ ಕುಮಾರ್ ನಟಿಸಿದ ಏಕೈಕ
ತೆಲುಗು ಚಿತ್ರ  1952ರಲ್ಲಿ ಬಿಡುಗಡೆಯಾದ ಶ್ರೀ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಡಾ. ರಾಜ್ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಸಪ್ತ ಖುಷಿಗಳಲ್ಲಿ ಒಬ್ಬನಾದ ಪಾತ್ರದಲ್ಲಿ ನಟಿಸಿದ್ದ ಆ ಚಿತ್ರದ ಚಿತ್ರೀಕರಣ ಒಂದು ದಿನ ಮಾತ್ರವಿತ್ತು. ಆ ಪಾತ್ರಕ್ಕೆ ರಾಜ್ ಅವರಿಗೆ ಅಂದು ಸಿಕ್ಕಿದ್ದ ಸಂಭಾವನೆ ಐದು ರೂಪಾಯಿ. ಅದರಲ್ಲಿ ಎರಡುವರೆ ರೂಪಾಯಿ ವೆಚ್ಚಮಾಡಿ ತಾಯಿಗೆ ಕಂಬಳಿ ತಂದುಕೊಟ್ಟಿದ್ದರು.

12 comments:

  1. avg antivirus crack This article is so innovative and well constructed I got lot of information from this post. Keep writing related to the topics on your site.

    ReplyDelete
  2. Thank you, I’ve recently been searching for information about this subject for a long time and yours is the best I have found out so far. avira-antivirus-pro-crack

    ReplyDelete
  3. https://shirdikesaibabagroup.blogspot.com/2011/04/blog-post.html?showComment=1623566948574#c8928788582758682379

    ReplyDelete
  4. Eset Endpoint Security Crack Such a nice and helpful piece of information. I’m so happy that you shared this helpful information with us. Please keep us up to date like this. Thanks for sharing. Visit My site

    ReplyDelete
  5. Autodesk Revit 2022 Crack modified on account of the instrument for business organization. It is as of now representing a program, the absolute price tag of this evening. Gain all ascribes. The Revit 2022 can save the capacity to alter off the plan and off. It is network-sharing and precasts the worth of the undertaking. You can cause Unitechnik alongside PXML documents. With its help, further develop the undertaking cost. You can timetable to check out the information read more modest textual style and pages. It is Tracking the channel, link, menu, and conductor of the entirety of the components.

    ReplyDelete
  6. Its a Very Great and Amazing Blog Dear This is Very Great and Helpful..
    Talha PC
    Crackedithere
    avocode crack
    axure rp pro crack

    ReplyDelete

  7. itdefender Mobile Security Crack


    This platform for articles is so creative and well-formed that I got a lot of facts from this post. Keep reporting related to the subjects on your site.

    ReplyDelete